ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಕ್ರಾಸನದಲ್ಲಿ 100 ಮೀಟರ್‌ ಕ್ರಮಿಸುವ ಸಾಧಕ

Last Updated 7 ಜನವರಿ 2018, 6:16 IST
ಅಕ್ಷರ ಗಾತ್ರ

ಬೆಳೆಯುವ ಸಿರಿ ಮೊಳಕೆಯಲಿ ಎಂಬಂತೆ ಬಾಲ್ಯದಿಂದಲೂ ಯೋಗ ಶಿಕ್ಷಣದ ಬಗ್ಗೆ ಆಸಕ್ತಿ ಹೊಂದಿ ಗುರುವಿನ ಮಾರ್ಗದರ್ಶನದಲ್ಲಿ ವಿದ್ಯಾಭ್ಯಾಸದ ಜತೆಗೆ ಯೋಗ ಶಿಕ್ಷಣವನ್ನು ಕರಗತ ಮಾಡಿಕೊಂಡಿರುವ ಬಾಲಕನ ಪ್ರತಿಭೆ ಅದ್ಭುತ.

ಕಲಿಯುವ ಮನಸ್ಸು ಇದ್ದರೆ, ವಯಸ್ಸು ಅಡ್ಡಿಯಾಗದು ಎಂಬುದಕ್ಕೆ ಈ ಬಾಲಕ ಉದಾಹರಣೆಯಾಗಿದ್ದಾನೆ. ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿಯ ಸೋದೇನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ 5ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ರಾಜಶೇಖರ್, ಅದೇ ಗ್ರಾಮದ ನಾಗರಾಜು ಎಂಬುವವರ ಪುತ್ರ. ಈತ ಯೋಗ ಶಿಕ್ಷಣದ ಜತೆಗೆ ವಿದ್ಯಾಭ್ಯಾಸದಲ್ಲಿ ಮುಂದಿದ್ದಾನೆ.

ಈ ಬಾಲಕನನ್ನು ಕಂಡರೆ ಶಾಲೆಯ ಶಿಕ್ಷಕರು, ಎಸ್‌ಡಿಎಂಸಿ ಹಾಗೂ ಗ್ರಾಮಸ್ಥರಿಗೆ ಅಚ್ಚುಮೆಚ್ಚು. ಈತ ಕಲಿತಿರುವ ಯೋಗ ಶಿಕ್ಷಣದಲ್ಲಿ ಕ್ಲಿಷ್ಟಕರವಾದ ಆಸನಗಳಾದ ವ್ಯಕ್ಷಾಸನ, ಸರ್ವಂಗಾಸನ, ಶಿರ್ಷಾಸನ, ಚಕ್ರಾಸನ, ಧನುರಾಸನ, ಕುಕ್ಕುಟಾಸನ, ಗೋಮುಕಾಸನ, ವೀರಭದ್ರಾಸನ, ಅದೋಮುಖ ಟಿಟ್ಟಿಭಾಸನ, ಪಿಂಛ ವೃಶ್ಚಿಕಾಸನ, ಭುಜಪೀಡಾಸನ, ಯೋಗ ನಿದ್ರಾಸನ, ಮೈಯೂರಾಸನ, ಬದ್ಧ ಪದ್ಮಾಸನ, ಶಿರ್ಷಾ ಪದ್ಮಾಸನ, ಸುತ್ತಾ ಉಪಾವಿಷ್ಟ ಕೋನಾಸನ, ಸುಪ್ತ ವೀರಾಸನ, ಈ ರೀತಿಯ ಕ್ಲಿಷ್ಟಕರವಾದ ನೂರಾರು ಯೋಗಾಸನಗಳನ್ನು ಲೀಲಾಜಾಲವಾಗಿ ಮಾಡುತ್ತಾನೆ. ಇದರ ಜತೆಗೆ ಚಕ್ರಾಸನದಲ್ಲಿ 100 ಮೀಟರ್‌ನಷ್ಟು ದೂರ ಕ್ರಮಿಸುತ್ತಾನೆ.

ನನ್ನ ನೆಚ್ಚಿನ ಶಾಲೆಯ ಶಿಕ್ಷಕ ಹಾಗೂ ಯೋಗ ಗುರು ಎಚ್.ಆರ್.ಶಶಿಕುಮಾರ್ ಅವರ ಪ್ರೇರಣೆಯಿಂದ ನಾನು ಯೋಗಾಸನಗಳನ್ನು ಕಲಿಯಲು ಸಾಧ್ಯವಾಯಿತು ಎಂದು ವಿದ್ಯಾರ್ಥಿ ರಾಜಶೇಖರ್ ‘ಪ್ರಜಾವಾಣಿ’ಗೆ ತಿಳಿಸಿದರು. ಪ್ರತಿ ಶನಿವಾರ ಶಾಲೆಯಲ್ಲಿ ಯೋಗಶಿಕ್ಷಣವನ್ನು ಎಲ್ಲ ವಿದ್ಯಾರ್ಥಿಗಳಿಗೂ ಅಭ್ಯಾಸ ಮಾಡಿಸುತ್ತಿರುವುದರಿಂದ ಇದನ್ನು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಇಂತಹ ಯೋಗ ಶಿಕ್ಷಣವನ್ನು ನಮ್ಮ ಅಕ್ಕಪಕ್ಕದ ಶಾಲೆಗಳಲ್ಲಿ ಅಭ್ಯಾಸ ಮಾಡಿಸಬೇಕು ಎನ್ನುವುದು ವಿದ್ಯಾರ್ಥಿಗಳ ಅನಿಸಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT