ಗುರುವಾರ , ಜೂಲೈ 2, 2020
23 °C

ಮಗು ಪಡೆಯಲು ಸಲ್ಮಾನ್‌ಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಗು ಪಡೆಯಲು ಸಲ್ಮಾನ್‌ಗೆ ಸಲಹೆ

ನಟಿ ರಾಣಿ ಮುಖರ್ಜಿ ಹಾಗೂ ನಟ ಸಲ್ಮಾನ್‌ ಖಾನ್‌ ಅವರ ಸ್ನೇಹ ಜನಜನಿತ. ಈಚೆಗೆ ರಾಣಿ ಮುಖರ್ಜಿ ತಮ್ಮ ಗೆಳೆಯ ಸಲ್ಮಾನ್‌ಗೆ ಮಗುವನ್ನು ಪಡೆಯುವಂತೆ ಸಲಹೆ ನೀಡಿದ್ದಾರೆ.

ತಿಂಗಳ ಹಿಂದಷ್ಟೇ 1 ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ತಮ್ಮ ಮಗಳು ಆದಿರಾಳ ವಿವಾಹವನ್ನು ಸಲ್ಮಾನ್‌ ಖಾನ್‌ ಮಗನೊಂದಿಗೆ ನಿಗದಿ ಮಾಡಿದ್ದಾರೆ ರಾಣಿ. ಸಲ್ಮಾನ್‌ ನಿರೂಪಕರಾಗಿರುವ ಹಿಂದಿ ಆವೃತ್ತಿಯ ಬಿಗ್‌ಬಾಸ್‌ ಕಾರ್ಯಕ್ರಮಕ್ಕೆ ತಮ್ಮ ‘ಹಿಚ್ಕಿ’ ಚಿತ್ರದ ಪ್ರಚಾರಕ್ಕಾಗಿ ರಾಣಿ ಬಂದಿದ್ದರು. ಆಗ ಸಲ್ಮಾನ್‌ ಬಳಿ ‘ನೀನು ಮದುವೆಯಾಗುವುದನ್ನು ಅವಾಯ್ಡ್‌ ಮಾಡು, ಸುಮ್ಮನೆ ಮಗು ಮಾತ್ರ ಪಡೆದುಕೊ. ನಿಮ್ಮ ಮಗು ನನ್ನ ಮಗಳು ಆದಿರಾಳಿಗೆ ಉತ್ತಮ ಜೊತೆಗಾರ ಸಿಗಲಿ’ ಎಂದು ಸಲಹೆ ನೀಡಿದ್ದಾರೆ.

ಸಲ್ಮಾನ್‌ ಯಾವಾಗ ಮದುವೆಯಾಗುತ್ತಾರೆ ಎಂದು ಅವರ ಅಭಿಮಾನಿಗಳು ಕಾಯುತ್ತಿದ್ದಾರೆ. ಈ ಹಿಂದೆ ಸಲ್ಮಾನ್‌ ಸಹ ಬಾಡಿಗೆತಾಯಿ ಮೂಲಕ ಮಗು ಹೊಂದುವ ಇಂಗಿತ ವ್ಯಕ್ತಪಡಿಸಿದ್ದರು. ಈಗ ಅವರ ಸ್ನೇಹಿತರು ಸಹ ಮದುವೆಯಾಗದೇ ಮಗು ಪಡೆಯುವಂತೆ ಸಲಹೆ ನೀಡುತ್ತಿರುವುದು ಹೊಸ ಚರ್ಚೆ ಹುಟ್ಟುಹಾಕಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.