ಸೋಮವಾರ, ಜೂಲೈ 6, 2020
21 °C

ಕೆಜೆಪಿಯಲ್ಲಿದ್ದಾಗ 'ಜೈ ಟಿಪ್ಪು'; ಬಿಜೆಪಿಗೆ ಮರಳಿದಾಗ 'ಜೈ ಶ್ರೀರಾಮ್'; ಮುಂದೆ ಯಾರಿಗೆ ಜೈ?: ಸಿದ್ದರಾಮಯ್ಯ ಟೀಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಜೆಪಿಯಲ್ಲಿದ್ದಾಗ 'ಜೈ ಟಿಪ್ಪು'; ಬಿಜೆಪಿಗೆ ಮರಳಿದಾಗ 'ಜೈ ಶ್ರೀರಾಮ್'; ಮುಂದೆ ಯಾರಿಗೆ ಜೈ?: ಸಿದ್ದರಾಮಯ್ಯ ಟೀಕೆ

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಮಧ್ಯೆ ಕೆಸರೆರಚಾಟ ಹಾಗೂ ವಾಗ್ದಾಳಿ ನಡೆಯುತ್ತಲೇ ಇದೆ.

ಮುಂದಿನ ವಿಧಾನಸಭೆ ಚುನಾವಣೆಯನ್ನು ಗುರಿಯಾಗಿರಿಸಿಕೊಂಡಿರುವ ಪಕ್ಷಗಳು ಪರಸ್ಪರ ಟೀಕೆ, ಹೀಯಾಳಿಸುವುದಲ್ಲಿ ಮಗ್ನವಾಗಿವೆ.

ಅವರಿಗಿಂತ ನಾನೇನು ಕಮ್ಮಿ; ಇವರಿಗಿಂತ ಅವರೇನು ಕಮ್ಮಿ ಎಂದು ಒಬ್ಬರ ಮೇಲೊಬ್ಬರು ಮುಗಿಬಿದ್ದು, ವಾಗ್ದಾಳಿ ನಡೆಸಿಸುತ್ತಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಭಾನುವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ಮತ್ತು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಅವರ ವಿರುದ್ಧ ಟೀಕೆ ಮಾಡಿದ್ದಾರೆ.

‘ಬಿಜೆಪಿ ಬಿಎಸ್‌ವೈ

ಕೆಜೆಪಿಯಲ್ಲಿದ್ದಾಗ 'ಜೈ ಟಿಪ್ಪು'

ಬಿಜೆಪಿಗೆ ಮರಳಿದಾಗ 'ಜೈ ಶ್ರೀರಾಮ್'

ಮುಂದೆ ಯಾರಿಗೆ ಜೈ?’
ಎಂದು ಸಿದ್ದರಾಮಯ್ಯ ಅವರು ಟ್ವೀಟ್‌ ಮಾಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.