ಕಾರು ಅಪಘಾತ: ಪವರ್‌ಲಿಫ್ಟರ್‌ ಸಕ್ಷಮ್‌ ಸೇರಿ ಐದು ಮಂದಿ ಸಾವು

7

ಕಾರು ಅಪಘಾತ: ಪವರ್‌ಲಿಫ್ಟರ್‌ ಸಕ್ಷಮ್‌ ಸೇರಿ ಐದು ಮಂದಿ ಸಾವು

Published:
Updated:

ನವದೆಹಲಿ: ದೆಹಲಿ–ಹರಿಯಾಣ ಗಡಿಭಾಗ ಸಿಂಘುವಿ ಬಳಿ ಭಾನುವಾರ ಬೆಳಿಗ್ಗೆ ಸಂಭವಿಸಿದ ಕಾರು ಅಪಘಾತದಲ್ಲಿ ರಾಷ್ಟ್ರಮಟ್ಟದ ಪವರ್‌ಲಿಫ್ಟರ್‌ ಸಕ್ಷಮ್‌ ಯಾದವ್‌ ಸೇರಿದಂತೆ ಐದು ಮಂದಿ ಸಾವನ್ನಪ್ಪಿದ್ದಾರೆ. ‌

‘ಚಾಲಕ ನಿಯಂತ್ರಣ ಕಳೆದುಕೊಂಡ ಕಾರಣ, ಕಾರು ಮೊದಲು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ನಂತರ ಕಂಬಕ್ಕೆ ಹೊಡೆದಿರುವುದರಿಂದ ಈ ಘಟನೆ ನಡೆದಿದೆ’ ಎಂದು ಪೊಲೀಸರು ಹೇಳಿದ್ದಾರೆ.

‘ಸ್ಥಳದಲ್ಲಿಯೇ ನಾಲ್ವರು ಸಾವನ್ನಪ್ಪಿದ್ದರು. ಸಕ್ಷಮ್‌ ಸೇರಿದಂತೆ ಇನ್ನೊಬ್ಬ ತೀವ್ರವಾಗಿ ಗಾಯಗೊಂಡಿದ್ದರು. ಸಕ್ಷಮ್‌ ಅವರ ತಲೆಗೆ ಬಲವಾದ ಏಟು ಬಿದ್ದಿದ್ದರಿಂದ ಚಿಕಿತ್ಸೆಗೆ ಅವರು ಸ್ಪಂದಿಸದೇ ಸಂಜೆ ಆರೂವರೆ ಸುಮಾರಿಗೆ ಸಾವನ್ನಪ್ಪಿದರು’ ಎಂದು ಅವರು ವಿವರಿಸಿದರು.

‘ಸ್ನೇಹಿತನ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಇವರೆಲ್ಲಾ ವಾಪಸಾಗುತ್ತಿದ್ದರು. ಕಾರಿನಲ್ಲಿ ಮದ್ಯದ ಬಾಟಲ್‌ಗಳು ದೊರೆತಿದ್ದು, ಚಾಲಕ ಕುಡಿದು ಚಾಲನೆ ಮಾಡಿರುವ ಶಂಕೆ ಇದೆ’ ಎಂದು ‌ಪೊಲೀಸರು ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry