ಸೋಮವಾರ, ಜೂಲೈ 6, 2020
28 °C

ಲಗೋರಿ: ರಾಜ್ಯ ಮಹಿಳಾ ತಂಡ ಚಾಂಪಿಯನ್‌

ಪಿಟಿಐ Updated:

ಅಕ್ಷರ ಗಾತ್ರ : | |

ಮಂಗಳೂರು: ಅಮೆಚೂರ್ ಲಗೋರಿ ಫೆಡರೇಷನ್ ಆಫ್ ಇಂಡಿಯಾ ಹಾಗೂ ಕರ್ನಾಟಕ ಲಗೋರಿ ಸಂಸ್ಥೆಗಳು ಪಾಥ್‌ವೇ ಸಂಸ್ಥೆಯ ಆಶ್ರಯದಲ್ಲಿ ಇಲ್ಲಿನ ಕರಾವಳಿ ಮೈದಾನದಲ್ಲಿ ಆಯೋಜಿಸಿದ್ದ ರಾಷ್ಟ್ರಮಟ್ಟದ ಸೀನಿಯರ್ ಲಗೋರಿ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಮಹಿಳಾ ತಂಡ ಚಾಂಪಿಯನ್‌ ಆಗಿದೆ.

ಭಾನುವಾರ ನಡೆದ ಫೈನಲ್‌ನಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ ಜಯ ಗಳಿಸಿತು. ಪುದುಚೇರಿ ತಂಡ ಮೂರನೇ ಸ್ಥಾನ ಗಳಿಸಿತು.

ಪುರುಷರ ವಿಭಾಗದಲ್ಲಿ ಪುರುಚೇರಿ ತಂಡ ದಾದರ್‌ ಹವೇಲಿ ತಂಡವನ್ನು ಸೋಲಿಸುವ ಮೂಲಕ ಚಾಂಪಿಯನ್‌ ಆಯಿತು. ಕರ್ನಾಟಕ ತಂಡ ತೃತೀಯ ಸ್ಥಾನ ಗಳಿಸಿತು.

‘ಸಂಘಟನಾತ್ಮ‌ಕ ಆಟ ಗೆಲುವಿಗೆ ಕಾರಣವಾಯಿತು. ಒಂದು ತಿಂಗಳಿಂದ ಟೂರ್ನಿಗೆ ತಯಾರಿ ನಡೆಸಿದ್ದೆವು’ ಎಂದು ಕರ್ನಾಟಕ ಮಹಿಳಾ ತಂಡದ ನಾಯಕಿ ಕೆ. ಕಾವ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.