ಮಂಗಳವಾರ, ಜೂಲೈ 7, 2020
23 °C

ಪೌರಕಾರ್ಮಿಕರು ಪಟ್ಟಣದ ಕಣ್ಣು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ‘ಪೌರ ಕಾರ್ಮಿಕರು ಪಟ್ಟಣದ ಕಣ್ಣುಗಳು ಇದ್ದಂತೆ, ಸರ್ಕಾರ ನೀಡುವ ಅನುದಾನಗಳ ಜತೆಗೆ ಖಾಸಗಿಯವರು ನೀಡುವ ಸಹಕಾರವನ್ನು ಸದುಪಯೋಗ ಪಡಿಸಿಕೊಂಡು ಉತ್ತಮ ಜೀವನ ನಡೆಸಬೇಕು’ ಎಂದು ಪುರಸಭಾ ಸದಸ್ಯ ಎಂ.ವಿ. ವೇಮನ್ನ ತಿಳಿಸಿದರು. ಪಟ್ಟಣದಲ್ಲಿ ಭಾನುವಾರ ಪುರಸಭೆಯ ಕಸ ತುಂಬುವ ವಾಹನಗಳ ಚಾಲಕರಿಗೆ ಹಮ್ಮಿಕೊಂಡಿದ್ದ ಉಚಿತ ಜಾಕೆಟ್‌ ವಿತರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೌರ ಕಾರ್ಮಿಕರು ಸ್ವಚ್ಛತೆ ಕಾಪಾಡಿದರೆ ಮಾತ್ರ ಪಟ್ಟಣ ಸುಂದರವಾಗಿರುತ್ತದೆ. ಬೆಳಿಗಿನ ಜಾವದಲ್ಲಿ ಚಳಿ ಗಾಳಿ ಎನ್ನದೆ ನಾವು ಏಳುವ ಮುನ್ನವೆ ನಮ್ಮ ಮನೆಗಳ ಸುತ್ತ ಸ್ವಚ್ಛತೆ ಮಾಡುವ ಕೆಲಸದಲ್ಲಿ ತಮ್ಮನ್ನ ತಾವು ತೋಡಗಿಸಿಕೊಂಡು ನಿತ್ಯ ಕಾಯಕ ಯೋಗಿಗಳಂತೆ ಕೆಲಸ ಮಾಡುತ್ತಾರೆ’ ಎಂದರು.

‘ಇತ್ತೀಚಿನ ದಿನಗಳಲ್ಲಿ ಚಳಿ ಹೆಚ್ಚಾಗಿದೆ. ಅದ್ದರಿಂದ ಪುರಸಭೆಯ ಕಸದ ವಾಹನಗಳ ಚಾಲಕರಿಗೆ ಜಾಕೇಟ್‌ ನೀಡಲಾಗಿದೆ’ ಎಂದು ತಿಳಿಸದರು. ‘ಕಾರ್ಮಿಕರಿಗೆ ದೊರೆಯುವ ಎಲ್ಲ ಅಗತ್ಯ ಸೌಲಭ್ಯಗಳನ್ನು ಇಲ್ಲಿನ ಪುರಸಭೆ ಕಲ್ಪಿಸಿಕೊಟ್ಟಿದೆ. ಆರೋಗ್ಯ ತಪಾಸಣೆ, ಪರಿಷ್ಕೃತ ವೇತನ, ವಿದ್ಯಾರ್ಥಿ ವೇತನ ಸೇರಿದಂತೆ ಉಪಹಾರ ನೀಡಲಾಗುತ್ತಿದೆ’ ಎಂದರು.

ಪುರಸಭಾ ಸದಸ್ಯ ಅಪ್ಸರ್ ಪಾಷಾ, ಮುಖಂಡರಾದ ರಷೀದ್ ಖಾನ್, ಗುಟ್ಟಸ್ವಾಮಿ, ಬಾಲಾಜಿ ಸಿಂಗ್, ತ್ಯಾಗರಾಜ್, ಅಶ್ವಥನಾರಾಯಣಗೌಡ, ಈಶ್ವರ್, ವೆಂಕಟೇಶ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.