ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಸಂಸ್ಕೃತಿ ಉಳಿಸಲು ಬ್ರಾಹ್ಮಣ್ಯ ಉಳಿವು ಅವಶ್ಯ

Last Updated 8 ಜನವರಿ 2018, 9:07 IST
ಅಕ್ಷರ ಗಾತ್ರ

ನರಸಿಂಹರಾಜಪುರ: ಭಾರತದ ಪ್ರಾಚೀನವಾದ ಭದ್ರ ಬುನಾದಿಯುಳ್ಳ ಸನಾತನ ಸಂಸ್ಕೃತಿಯನ್ನು ಉಳಿಸಲು ಬ್ರಾಹ್ಮಣ್ಯ ಉಳಿಸುವು ದು ಅವಶ್ಯಕ ಎಂದು ನಿವೃತ್ತ ಕನ್ನಡ ಪಂಡಿತ ವಿ.ಎಸ್.ಕೃಷ್ಣಭಟ್ ತಿಳಿಸಿದರು.

ಇಲ್ಲಿನ ಉಮಾ ಮಹೇಶ್ವರ ಸಮುದಾಯ ಭವನದಲ್ಲಿ ಭಾನುವಾರ ತಾಲ್ಲೂಕು ಬ್ರಾಹ್ಮಣ ಮಹಾ ಸಭಾದಿಂದ ಆಯೋಜಿಸಿದ್ದ ವಿದ್ಯಾರ್ಥಿ ವೇತನ ಹಾಗೂ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು.

‘ಸಮುದಾಯಕ್ಕೆ ಅನ್ಯಾಯವಾದಾಗ, ಸವಲತ್ತುಗಳನ್ನು ಪಡೆದುಕೊಳ್ಳಲು ಸಂಘಟನೆ ಅವಶ್ಯಕವಾಗಿದೆ. ಪ್ರತಿಭೆ ಎನ್ನುವುದು ಸಾರ್ವಾ ಕಾಲಿಕ ಇರುವಂತಹದ್ದು, ಹಿಂದೆ, ಇಂದು, ಮುಂದೆ ಅನುಕೂಲವಾಗುವಂತೆ ಬುದ್ಧಿ ಚುರುಕುಗೊಳಿಸುವುದರಿಂದ ಪ್ರತಿಭೆ ಬೆಳೆಯ ಲು ಸಹಕಾರಿಯಾಗುತ್ತದೆ. ಪ್ರತಿಭಾನ್ವಿತ ವಿದ್ಯಾರ್ಥಿಗಳಲ್ಲಿ ನೆನಪಿನ ಶಕ್ತಿ, ಅಭ್ಯಾಸ ಶಕ್ತಿ, ಸಮಯಸ್ಪೂರ್ತಿ, ಗುರಿ ಇರುತ್ತದೆ. ಇದನ್ನು ಸಮಾಜದವರು ಗುರುತಿಸಿ ಪ್ರೋತ್ಸಾಹಿಸಬೇಕು. ವಿದ್ಯಾರ್ಥಿಗಳು ಅಂಕಗಳಿಸುವುದಕ್ಕೂ ಮುನ್ನಾ ಅದನ್ನು ಗಳಿಸಲು ನಿರಂತರ ಅಧ್ಯ ಯನದಲ್ಲಿ ತೊಡಗಿಸಕೊಳ್ಳಬೇಕು’ ಎಂದರು.

‘ತಾಲ್ಲೂಕು ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ವೆಂಕಟರಮಣ ಮಾತನಾಡಿ, ತಾಲ್ಲೂಕು ಬ್ರಾಹ್ಮಣ ಮಹಾಸಭಾ 50 ಕ್ಕೂ ಹೆಚ್ಚು ವರ್ಷ ಇತಿಹಾಸವಿದೆ. ತಾಲ್ಲೂಕು 14 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಸಭೆಗಳನ್ನು ನಡೆಸಲಾಗುತ್ತಿದೆ. ಸಬಾ ನಿವೇಶನದ ಸುತ್ತ ತಡೆಗೋಡೆ, ವ್ಯಾಪಾರ ಮಳಿಗೆ ನಿರ್ಮಿಸಲು ನಿರ್ಧರಿಸಲಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ತಾಲ್ಲೂಕು ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಜೆ.ಜಿ.ಸದಾಶಿವಭಟ್, ಸಮುದಾಯದ ಮಕ್ಕಳು ಉತ್ತಮ ಶಿಕ್ಷಣವನ್ನು ಪಡೆದು ಹೆಚ್ಚು ಅಂಕಗಳಿಗೆ ಸಮಾಜಕ್ಕೆ ಕೀರ್ತಿ ತರಬೇಕು’ಎಂದರು.

ಸಭಾದ ಗೌರವ ಅಧ್ಯಕ್ಷ ಚಂದ್ರಶೇಖರ ಐತಾಳ್, ಉಪಾಧ್ಯಕ್ಷರಾದ ಎಸ್.ಸುಬ್ರಹ್ಮಣ್ಯ, ಎಚ್.ಎಸ್.ವೆಂಕಟೇಶ್ . ಎಚ್.ಜಿ.ಪ್ರಕಾಶ್ . ಸುಧಾಕರ್ . ಭಾಗ್ಯ ನಂಜುಂಡಸ್ವಾಮಿ. ಶಂಕರ್ ಇದ್ದರು.

ಕಳೆದ ಸಾಲಿನ ಎಸ್‍ಎಸ್‍ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4 ಸ್ಥಾನ ಪಡೆದ ಸಿಂಚನ ಉಡುಪ, ಮಧುರ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಎ.ಎಸ್.ನಂದನಭಾರದ್ವಾಜ್, ಎಚ್.ಎಸ್.ಶ್ರವಣ್, ವೈ.ಎಸ್.ಅಮೃತ, ಎಚ್.ಸಿ.ಚೇತನಾ, ಜೆ.ಎಂ.ಅಭಿಷೇಕ್, ಅನನ್ಯ, ಬಿ.ಎಸ್.ಅಕ್ಷಯ್, ಸುಷ್ಮಾ, ಎನ್.ಆರ್.ಸನ್ನಿಧಿ, ಬಿ.ಆರ್. ಅನಗಾ, ವಿನಯ್ ದೀಕ್ಷಿತ್, ಸುಜನಾ, ಎನ್,ಆರ್.ಸುಷ್ಮಾ, ಸಂತೃಪ್ತಿ, ಎನ್.ಪನ್ನಗಾ, ಅಪರ್ಣ, ಸುಷ್ಮಾ ಅವರಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ನೀಡಿ ಗೌರವಿಸಲಾಯಿತು.

* * 

ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವುದು ಸನಾತ ಸಂಸ್ಕೃತಿಯ ಅಳಿವಿಗೆ ಕಾರಣವಾಗಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಮಕ್ಕಳಿಗೆ ಪೋಷಕರು ಅರಿವು ಮೂಡಿಸಬೇಕು.
ವಿ.ಎಸ್.ಕೃಷ್ಣಭಟ್‌
ನಿವೃತ್ತ ಕನ್ನಡ ಪಂಡಿತ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT