ಶನಿವಾರ, ಜೂಲೈ 4, 2020
21 °C

ಸುರತ್ಕಲ್‌: ಹಲ್ಲೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸುರತ್ಕಲ್‌: ಹಲ್ಲೆಗೆ ಯತ್ನ

ಮಂಗಳೂರು: ನಗರದ ಸುರತ್ಕಲ್‌ ಬಳಿಯ ಅಗರಮೇಲು ಎಂಬಲ್ಲಿ ಸ್ಥಳೀಯ ನಿವಾಸಿ ಭರತ್‌ ಎಂಬ ಯುವಕನ ಮೇಲೆ ಗುಂಪೊಂದು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಲು ಯತ್ನಿಸಿದೆ.

ಹಿಂದೂ ಜಾಗರಣ ವೇದಿಕೆಯ ಸುರತ್ಕಲ್‌ ಘಟಕದ ಸಹ ಸಂಚಾಲಕ ಭರತ್‌ ಅಗರಮೇಲು ಹಲ್ಲೆಯಿಂದ ತಪ್ಪಿಸಿಕೊಂಡವರು. ರಾತ್ರಿ 8.30ರ ಸುಮಾರಿಗೆ ಮೋಟಾರ್‌ ಬೈಕ್‌ನಲ್ಲಿ ಬರುತ್ತಿದ್ದಾಗ ಅಡ್ಡಗಟ್ಟಿದ ನಾಲ್ವರು ಭರತ್‌ ಮೇಲೆ ಹಲ್ಲೆಗೆ ಯತ್ನಿಸಿ, ಪರಾರಿಯಾಗಿದ್ದಾರೆ.

‘ಪೊದೆಯೊಂದರಲ್ಲಿ ಅಡಗಿ ಕುಳಿತಿದ್ದ ನಾಲ್ವರು ನನ್ನನ್ನು ಅಡ್ಡಗಟ್ಟಿ ತಲವಾರುಗಳಿಂದ ಹಲ್ಲೆ ಮಾಡಲು ಯತ್ನಿಸಿದರು. ಓಡಿ ಪಾರಾಗಿ ಬಂದಿದ್ದೇನೆ’ ಎಂದು ಭರತ್‌ ಸುರತ್ಕಲ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.