ಸಂವಿಧಾನ ಪರಾಮರ್ಶೆ, ದೇಶಕ್ಕೆ ಮಾರಕ

7

ಸಂವಿಧಾನ ಪರಾಮರ್ಶೆ, ದೇಶಕ್ಕೆ ಮಾರಕ

Published:
Updated:

ಬಂಟ್ವಾಳ: ‘ಸಂವಿಧಾನ ಪರಾಮರ್ಶೆ ಮತ್ತು ಸಂವಿಧಾನ ತಿದ್ದುಪಡಿ ನೆಪದಲ್ಲಿ ಮನುವಾದಿಗಳು ಪವಿತ್ರ ಸಂವಿಧಾನ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಇದು ದೇಶಕ್ಕೆ ಮಾರಕವಾಗಿದೆ’ ಎಂದು ದಲಿತ ಮುಖಂಡ ಭಾನುಚಂದ್ರ ಕೃಷ್ಣಾಪುರ ಹೇಳಿದ್ದಾರೆ. ತಾಲ್ಲೂಕಿನ ಬಿ.ಸಿ.ರೋಡು ಮಿನಿ ವಿಧಾನಸೌಧ ಎದುರು ದಲಿತ ಮಹಾ ಸಭಾವತಿಯಿಂದ ಸೋಮವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಸಂವಿಧಾನವನ್ನು ಪರಾಮರ್ಶೆಗೆ ಒಳಪಡಿಸುವುದಾಗಿ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಹೇಳಿಕೆ ನೀಡುತ್ತಿದ್ದಾರೆ. ಇದಕ್ಕೆ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಸಮರ್ಥನೆ  ಇತ್ಯಾದಿಗಳು ಖಂಡನೀಯ’ ಎಂದರು.

‘ಇದೀಗ ಮುಸ್ಲಿಂ ಮತ್ತಿತರ ಅನ್ಯಧರ್ಮೀಯರು ದಲಿತ ಪರವಾಗಿ ಧ್ವನಿಗೂಡಿಸುತ್ತಿದ್ದಾರೆ. ದಲಿತರ ಮೇಲೆ ಅತಿಕ್ರಮಣ ಮುಂದುವರಿದರೆ ನಾವು ಸಾಮಾಹಿಕ ಮತಾಂತರವಾಗುವುದಾಗಿ’ ಎಚ್ಚರಿಸಿದರು.

ಎಸ್‌ಡಿಪಿಐ ಮುಖಂಡ ಹನೀಫ್ ಖಾನ್ ಕೊಡಾಜೆ ಮಾತನಾಡಿ, ‘ಟಿಪ್ಪು ಸುಲ್ತಾನ್ ವಿರೋಧಿಗಳು ಇದೀಗ ಅಂಬೇಡ್ಕರ್ ಅವರು ರಚಿಸಿದ ಸಂವಿಧಾನ ವಿರೋಧಿಸುತ್ತಿದ್ದಾರೆ’ ಎಂದರು. ಸಿಪಿಎಂ ಪ್ರಧಾನ ಕಾರ್ಯದರ್ಶಿ ರಾಮಣ್ಣ ವಿಟ್ಲ ಮಾತನಾಡಿ, ‘ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸದ ಸಂಘ ಪರಿವಾರಕ್ಕೆ ಈ ದೇಶದ ಚರಿತ್ರೆ ಗೊತ್ತಿಲ್ಲ’ ಎಂದರು.

ಜಿಲ್ಲಾ ಪಂಚಾಯಿತಿ ಸದಸ್ಯ ಶೇಖರ ಕುಕ್ಕೇಡಿ, ಬಂಟ್ವಾಳ ಪುರಸಭೆ ಮಾಜಿ ಅಧ್ಯಕ್ಷೆ ವಸಂತಿ ಚಂದಪ್ಪ  ಮಾತನಾಡಿ, ‘ಸಂವಿಧಾನ ರಕ್ಷಣೆಗೆ ಜಾತ್ಯತೀತ ಮನಸ್ಸುಗಳು ಒಂದಾಗಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ಪದ್ಮಶೇಖರ ಜೈನ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಬಿ.ಎಂ.ಅಬ್ಬಾಸ್ ಅಲಿ, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಕೆ.ಮಾಯಿಲಪ್ಪ ಸಾಲಿಯಾನ್, ಕಾಂಗ್ರೆಸ್ ಮಹಿಳಾ ಘಟಕ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ, ಪುರಸಭಾ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ವಾಸು ಪೂಜಾರಿ, ಸದಸ್ಯರಾದ ಪ್ರವೀಣ್, ಮುನೀಶ್ ಅಲಿ, ಜಗದೀಶ ಕುಂದರ್, ಗಂಗಾಧರ ಪೂಜಾರಿ, ಮಹಮ್ಮದ್ ಇಕ್ಬಾಲ್ ಗೂಡಿಬಬಳಿ, ಗೇರು ಅಭಿವೃದ್ಧಿ ನಿಗಮ ಸದಸ್ಯ ಜಗದೀಶ ಕೊಯಿಲ, ಎಸ್ಡಿಪಿಐ ಮುಖಂಡ ಶಾಹುಲ್ ಹಮೀದ್, ಇಸಾಖ್ ತಲಪಾಡಿ, ಪ್ರಮುಖರಾದ ರಾಜ ಪಲ್ಲಮಜಲು, ರಾಜೀವ ಕಕ್ಯಪದವು, ಅಬೂಬಕ್ಕರ್ ಅಮ್ಮುಂಜೆ ಇದ್ದರು. ಆರಂಭದಲ್ಲಿ ಬಿ.ಸಿ.ರೋಡಿನ ಕೈಕಂಬ ಪೊಳಲಿ ದ್ವಾರದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನಾ ಜಾಥಾ ನಡೆಯಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry