ಓಲ್ಡ್ ಮಾಂಕ್ ರಮ್ ಯಶಸ್ಸಿನ ರೂವಾರಿ ಕಪಿಲ್ ಮೋಹನ್ ವಿಧಿವಶ

7

ಓಲ್ಡ್ ಮಾಂಕ್ ರಮ್ ಯಶಸ್ಸಿನ ರೂವಾರಿ ಕಪಿಲ್ ಮೋಹನ್ ವಿಧಿವಶ

Published:
Updated:
ಓಲ್ಡ್ ಮಾಂಕ್ ರಮ್ ಯಶಸ್ಸಿನ ರೂವಾರಿ ಕಪಿಲ್ ಮೋಹನ್ ವಿಧಿವಶ

ಮುಂಬೈ: ರಮ್ ಪ್ರಿಯರಿಗೆ ಓಲ್ಡ್ ಮಾಂಕ್ ರಮ್ ಪರಿಚಯಿಸಿದ್ದ ಕಪಿಲ್ ಮೋಹನ್ (88) ಸೋಮವಾರ ರಾತ್ರಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

ಭಾರತದ ಮೊದಲ ಮದ್ಯ ತಯಾರಿಕಾ ಸ್ಥಳವಾದ ಮೋಹನ್ ಮೆಕಿನ್‍ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದರು ಕಪಿಲ್ ಮೋಹನ್. ಘಾಜಿಯಾಬಾದ್‍ನಲ್ಲಿರುವ ನಿವಾಸದಲ್ಲಿ ಕಪಿಲ್ ಕೊನೆಯುಸಿರೆಳೆದಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ.

ಭಾರತೀಯ ಸೇನಾಪಡೆಯಲ್ಲಿ ಬ್ರಿಗೇಡಿಯರ್ ಆಗಿ ಸೇವೆ ಸಲ್ಲಿಸಿದ್ದ ಕಪಿಲ್, ವಿಶಿಷ್ಟ ಸೇವಾ ಪದಕ ಗಳಿಸಿದ್ದಾರೆ.

1954ರಂದು ಆರಂಭವಾದ ಓಲ್ಡ್ ಮಾಂಕ್ ರಮ್ ಜಗತ್ತಿನಲ್ಲಿ ಅತೀ ಹೆಚ್ಚು ಮಾರಾಟವಾಗುವ ಡಾರ್ಕ್ ರಮ್ ಆಗಿತ್ತು.

2010-14ರ ಅವದಿಯಲ್ಲಿ ಓಲ್ಡ್ ಮಾಂಕ್ ಮಾರಾಟದಲ್ಲಿ  ಶೇ. 54ರಷ್ಟು ಕುಸಿತ ಕಂಡು ಬಂದಿತ್ತು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

2010ರಲ್ಲಿ ಕಪಿಲ್ ಮೋಹನ್ ಅವರಿಗೆ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು,

ಕಪಿಲ್ ಮೋಹನ್ ಅವರಿಗೆ ಟ್ವಿಟರ್‍‍ನಲ್ಲಿ ಶ್ರದ್ದಾಂಜಲಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry