ಡಾಲರ್ ಸಾಗಾಟ: ಗಗನಸಖಿ ಬಂಧನ

7

ಡಾಲರ್ ಸಾಗಾಟ: ಗಗನಸಖಿ ಬಂಧನ

Published:
Updated:
ಡಾಲರ್ ಸಾಗಾಟ: ಗಗನಸಖಿ ಬಂಧನ

ನವದೆಹಲಿ: 4.8 ಲಕ್ಷ ಬೆಲೆಯ ಅಮೆರಿಕನ್ ಡಾಲರ್‌ ನೋಟುಗಳನ್ನು (ಸುಮಾರು ₹3.21 ಕೋಟಿ) ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪ ಮೇಲೆ ಜೆಟ್ ಏರ್‌ವೇಸ್‌ನ ಗಗನಸಖಿಯನ್ನು ಮಂಗಳವಾರ ಬಂಧಿಸಲಾಗಿದೆ.

ಜೆಟ್ ವಿಮಾನದ ಸಹಾಯಕಿಯು ದೆಹಲಿಯ ವಿವೇಕ್ ವಿಹಾರ್‌ ನಿವಾಸಿ ಅಮಿತ್ ಮಲ್ಹೋತ್ರಾ ಎಂಬಾತನಿಗೆ ಸೇರಿದ ನೋಟುಗಳನ್ನು ಹಾಳೆಯಲ್ಲಿ ಸುತ್ತಿ ಹಾಂಕಾಂಗ್‌ಗೆ ಸಾಗಿಸುತ್ತಿದ್ದಾಗ ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಗಗನಸಖಿಯು ಸೋಮವಾರ ಹಾಂಕಾಂಗ್‌ಗೆ ತೆರಳುತ್ತಿದ್ದ ವಿಮಾನದಲ್ಲಿದ್ದಾಗ ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ.

ಹವಾಲ ಜಾಲದ ಪ್ರಮುಖ ಸದಸ್ಯೆ:  ಬಂಧಿನಕ್ಕೊಳಗಾಗಿರುವ ಮಹಿಳೆಯು ಜಾಗತಿಕ ಹವಾಲ ಜಾಲದ ಪ್ರಮುಖ ಸದಸ್ಯೆ ಎಂದು ಕಂದಾಯ ಗುಪ್ತಚರ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

ಈ ಜಾಲದಲ್ಲಿ ವಿಮಾನಯಾನ ಸಂಸ್ಥೆಯ ಇತರ ಸಿಬ್ಬಂದಿಯ ಪಾತ್ರದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry