ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚಿಸುವ ರಾತ್ರಿ ಪಾಳಿ

7

ಮಹಿಳೆಯರಲ್ಲಿ ಕ್ಯಾನ್ಸರ್ ಹೆಚ್ಚಿಸುವ ರಾತ್ರಿ ಪಾಳಿ

Published:
Updated:

ಬೀಜಿಂಗ್ : ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಜಠರ, ಚರ್ಮ ಮತ್ತು ಸ್ತನ ಕ್ಯಾನ್ಸರ್ ಬರುವ ಅಪಾಯ ಹೆಚ್ಚಾಗಿರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಮಹಿಳೆಯರಲ್ಲಿನ ಕ್ಯಾನ್ಸರ್ ಹಾಗೂ ರಾತ್ರಿ ಪಾಳಿಗೆ ನಿಕಟ ಸಂಬಂಧವಿದೆ ಎಂಬ ಈ ಹಿಂದಿನ ಅಧ್ಯಯನಕ್ಕೆ ಪುಷ್ಟಿ ನೀಡುವ ಫಲಿತಾಂಶ ಈಗಿನ ಅಧ್ಯಯನದಿಂದ ಬಂದಿದೆ. ದೀರ್ಘ ಕಾಲದ ರಾತ್ರಿ ಪಾಳಿಯು ಮಹಿಳೆಯರಲ್ಲಿ ಹನ್ನೊಂದು ಬಗೆಯ ಕ್ಯಾನ್ಸರ್ ರೋಗಕ್ಕೆ ಕಾರಣವಾಗುತ್ತದೆ ಎಂದು ಚೀನಾದ ಸಿಚುವಾನ್ ವಿಶ್ವವಿದ್ಯಾಲಯದ ಸಂಶೋಧಕರು ಹೇಳಿದ್ದಾರೆ.

1,14,628 ಕ್ಯಾನ್ಸರ್ ಪ್ರಕರಣಗಳ ಉಲ್ಲೇಖಗಳಿರುವ 61 ಲೇಖನಗಳ ದತ್ತಾಂಶವನ್ನು ವಿಶ್ಲೇಷಣೆ ಮಾಡಲಾಗಿದೆ. ಉತ್ತರ ಅಮೆರಿಕ, ಯುರೋಪ್, ಆಸ್ಟ್ರೇಲಿಯ ಮತ್ತು ಏಷ್ಯಾದ 39,09,152 ಮಹಿಳೆಯರನ್ನು ಅಧ್ಯಯನಕ್ಕೆ ಪರಿಗಣಿಸಲಾಗಿದೆ.

ದೀರ್ಘ ಕಾಲ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಶುಶ್ರೂಷಕಿಯರಲ್ಲಿ ಕಂಡುಬರುವ 6 ಬಗೆಯ ಕ್ಯಾನ್ಸರ್‌ಗಳಿಗೆ ಸಂಬಂಧಿಸಿದಂತೆಯೂ ಅಧ್ಯಯನ ನಡೆಸಲಾಗಿದೆ.

ಶೇ 41 ಜನರಿಗೆ ಚರ್ಮ ಕ್ಯಾನ್ಸರ್

ಕಡಿಮೆ ಅವಧಿಗೆ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಿದ ಮಹಿಳೆಯರಿಗೆ ಹೋಲಿಸಿದರೆ, ದೀರ್ಘಾವಧಿ ರಾತ್ರಿ ಪಾಳಿ ಕೆಲಸ ಮಾಡುವ ಮಹಿಳೆಯರಲ್ಲಿ ಚರ್ಮ ಕ್ಯಾನ್ಸರ್ ಪ್ರಮಾಣ ಶೇ 41, ಸ್ತನ ಕ್ಯಾನ್ಸರ್ ಪ್ರಮಾಣ ಶೇ 32 ಹಾಗೂ ಜಠರ ಕ್ಯಾನ್ಸರ್ ಬರುವ ಅಪಾಯ ಶೇ 18ರಷ್ಟು ಹೆಚ್ಚಿದೆ. ಶುಶ್ರೂಷಕಿಯರಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry