ಮುಬಶ್ಶೀರ್ ಮೇಲೆ ಹಲ್ಲೆ: ನಾಲ್ವರು ವಶಕ್ಕೆ

7

ಮುಬಶ್ಶೀರ್ ಮೇಲೆ ಹಲ್ಲೆ: ನಾಲ್ವರು ವಶಕ್ಕೆ

Published:
Updated:
ಮುಬಶ್ಶೀರ್ ಮೇಲೆ ಹಲ್ಲೆ: ನಾಲ್ವರು ವಶಕ್ಕೆ

ಮಂಗಳೂರು: ಕಾಟಿಪಳ್ಳದ ದೀಪಕ್‌ರಾವ್‌ ಹತ್ಯೆಯಾದ ಜನವರಿ‌ 3ರ ರಾತ್ರಿ ಕಾಟಿಪಳ್ಳದಲ್ಲಿ ಮಹಮ್ಮದ್ ಮುಬಶ್ಶೀರ ಮೇಲೆ ನಡೆದಿದ್ದ ಹಲ್ಲೆಗೆ ಸಂಬಂಧಿಸಿದಂತೆ ರೌಡಿ ನಿಗ್ರಹದಳದ ಅಧಿಕಾರಿಗಳು‌ ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ನಗರದ ಬಂದರು‌ ನಿವಾಸ ಮುಬಶ್ಶೀರ್ ಸಂಬಂಧಿಕರ‌ ಮದುವೆ ಜನವರಿ 3 ರಂದು ಕಾಟಿಪಳ್ಳದಲ್ಲಿ ನಡೆದಿತ್ತು ಮದುವೆ ಮುಗಿಸಿ ದ್ವಿಚಕ್ರ ವಾಹನದಲ್ಲಿ‌ ಮರಳುತ್ತಿದ್ದ ಮುಬಶ್ಶೀರ್ ಮೇಲೆ ತಲವಾರಿನಿಂದ ದಾಳಿ ನಡೆಸಲಾಗಿತ್ತು. ತಲೆಗೆ ಪೆಟ್ಟಾಗಿದ್ದ ಮುಬಶ್ಶೀರ್ ಸುರತ್ಕಲ್‌ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿಗಳ ‌ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ನಂತರವಷ್ಟೇ ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry