‘ಹರ ಹರ ಮಹಾದೇವ’ನ ಕೊನೆ ಸಂಚಿಕೆ

7

‘ಹರ ಹರ ಮಹಾದೇವ’ನ ಕೊನೆ ಸಂಚಿಕೆ

Published:
Updated:
‘ಹರ ಹರ ಮಹಾದೇವ’ನ ಕೊನೆ ಸಂಚಿಕೆ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಹರ ಹರ ಮಹಾದೇವ’ ಧಾರಾವಾಹಿ ಇದೇ 13ರಂದು ರಾತ್ರಿ 7.30ಕ್ಕೆ ಕೊನೆಯ ಸಂಚಿಕೆಯೊಂದಿಗೆ ಮುಕ್ತಾಯವಾಗಲಿದೆ. ಇದು 416 ಕಂತುಗಳ ಮೆಗಾ ಸೀರಿಯಲ್.

ಶಿವನ ಮಹಿಮೆ ಹಾಗೂ ಜೀವನಚಿತ್ರ ಒಳಗೊಂಡ ಈ ಧಾರಾವಾಹಿಯು ಪ್ರೇಕ್ಷಕರನ್ನು ಹಿಡಿದಿಟ್ಟಿತ್ತು. ಸತಿ, ಮಹಾದೇವರ ಪ್ರೇಮ ಪ್ರಸಂಗದಿಂದ ಆರಂಭವಾದ ಧಾರಾವಾಹಿಯಲ್ಲಿ ಮಹಾದೇವನ ಮಾರ್ತಾಂಡ ಅವತಾರವೂ ಅನಾವರಣಗೊಂಡಿತ್ತು. ಮಲ್ಲ, ಮಣಿ ಎಂಬ ದುಷ್ಟ ಅಘೋರರ ಅಂತ್ಯ, ಮಹಲ್ಸಳಾಗಿ ಅವತಾರವೆತ್ತಿದ ಪಾರ್ವತಿಯ ಜೊತೆ ವಿವಾಹವಾಗುವುದರ ರೋಚಕ ಸನ್ನಿವೇಶದೊಂದಿಗೆ ಅಂತ್ಯಗೊಳ್ಳಲಿದೆ.

ಶಿವನ ಪಾತ್ರಧಾರಿ ವಿನಯ್ ಗೌಡ ಮತ್ತು ಪಾರ್ವತಿ ಪಾತ್ರಧಾರಿ ಸಂಗೀತಾ ಅವರು ಈ ಧಾರಾವಾಹಿ ಮೂಲಕ ಜನಮಾನಸದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದು ವಿಶೇಷ.

ಇದು ನಿಖಿಲ್ ಸಿನ್ಹಾ ಒಡೆತನದ ಟ್ರಯಾಂಗಲ್ ಫಿಲಂ ಕಂಪನಿಯಿಂದ ಅದ್ದೂರಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಧಾರಾವಾಹಿಯಾಗಿದೆ.

ಮುಂಬೈನಲ್ಲಿ ನಿರ್ಮಿಸಿದ್ದ ಸೆಟ್‌ನಲ್ಲಿಯೇ ಸಂಪೂರ್ಣ ಚಿತ್ರೀಕರಣ ನಡೆಸಲಾಗಿತ್ತು. 

‘ಭರ್ಜರಿ’ ಸಂಕ್ರಾಂತಿ

ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ‘ಭರ್ಜರಿ’ ಸಂಕ್ರಾಂತಿ ಸಂಭ್ರಮ ಮನೆ ಮಾಡಿದೆ. ‘ಆ್ಯಕ್ಷನ್‌ ಪ್ರಿನ್ಸ್’ ಧ್ರುವ ಸರ್ಜಾ ಅಭಿನಯದ ‘ಭರ್ಜರಿ’ ಸಿನಿಮಾ ಜನವರಿ 14ರಂದು ಸಂಜೆ 5ಗಂಟೆಗೆ ಪ್ರಸಾರವಾಗಲಿದೆ.

ರಚಿತಾ ರಾಮ್, ಹರಿಪ್ರಿಯಾ ಮತ್ತು ವೈಶಾಲಿ ಈ ಚಿತ್ರದ ನಾಯಕಿಯರು. ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿಯಾಗಿ ಸದ್ದು ಮಾಡಿದ್ದ ಈ ಚಿತ್ರ ಕಿರುತೆರೆಯಲ್ಲಿ ಪ್ರಸಾರವಾಗಲಿದ್ದು, ಸುಗ್ಗಿ ಹಬ್ಬದ ಸಂಭ್ರಮಕ್ಕೆ ಮೆರುಗು ಹೆಚ್ಚಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry