ಗೋಹತ್ಯೆ: ಪರ್ರೀಕರ್‌ಗೆ ಯೋಗಿ ಆದಿತ್ಯನಾಥ ಸಲಹೆ ಕೊಡಲಿ– ಖರ್ಗೆ

7

ಗೋಹತ್ಯೆ: ಪರ್ರೀಕರ್‌ಗೆ ಯೋಗಿ ಆದಿತ್ಯನಾಥ ಸಲಹೆ ಕೊಡಲಿ– ಖರ್ಗೆ

Published:
Updated:
ಗೋಹತ್ಯೆ: ಪರ್ರೀಕರ್‌ಗೆ ಯೋಗಿ ಆದಿತ್ಯನಾಥ ಸಲಹೆ ಕೊಡಲಿ– ಖರ್ಗೆ

ಕಲಬುರ್ಗಿ: ಕರ್ನಾಟಕದಲ್ಲಿ ಗೋಹತ್ಯೆ ನಿಷೇಧಿಸಬೇಕು ಎನ್ನುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ಗೋವಾದಲ್ಲಿ ಮೊದಲು ಆ ಕೆಲಸ ಮಾಡುವಂತೆ ಅಲ್ಲಿಯ ತಮ್ಮದೇ ಪಕ್ಷದ ಮುಖ್ಯಮಂತ್ರಿಗೆ ಹೇಳಲಿ ಎಂದು ಸಂಸದ ಮಲ್ಲಿಕಾರ್ಜುನ ಖರ್ಗೆ ಸವಾಲು ಹಾಕಿದರು.

‘ಗೋವಾದಲ್ಲಿ ಗೋಮಾಂಸ ಸೇವಿಸುವವರ ಸಂಖ್ಯೆ ಹೆಚ್ಚು. ಹೊರಗಿನ ಜನ ಅಲ್ಲಿಗೆ ಬಂದು ಗೋಮಾಂಸ ಸೇವಿಸುತ್ತಾರೆ. ಇದಕ್ಕೆ ಮೊದಲು ಅಲ್ಲಿ ಕಡಿವಾಣ ಹಾಕಬೇಕು. ಬಳಿಕ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಆದಿತ್ಯನಾಥ ಅವರು ಸಲಹೆ ಕೊಡಲಿ’ ಎಂದು ತಾಲ್ಲೂಕಿನ ಸಿರಗಾಪುರದಲ್ಲಿ ಗುರುವಾರ ನಡೆದ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಆಗ್ರಹಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry