1.50 ಲಕ್ಷ ಮಂದಿಯ ಬೆಸೆದ ‘ಭೂಮಿ’

7

1.50 ಲಕ್ಷ ಮಂದಿಯ ಬೆಸೆದ ‘ಭೂಮಿ’

Published:
Updated:

ಬೆಂಗಳೂರು: ರೈತರು ಹಾಗೂ ಕೃಷಿ ಉತ್ಪನ್ನಗಳ ಖರೀದಿದಾರರ ನಡುವೆ ಸೇತುವೆಯಾಗಿ ಭೂಮಿ ವೆಬ್‌ಸೈಟ್‌ (bhoomee.co.in) ಕಾರ್ಯನಿರ್ವಹಿಸುತ್ತಿದೆ. ಇದರಿಂದ 1.50 ಲಕ್ಷ ಮಂದಿ ಇದರ ಪ್ರಯೋಜನ ಪಡೆದಿದ್ದಾರೆ ಎಂದು ಭೂಮಿ ವೇದಿಕೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುನಂದನ್‌ ಟಿ. ಎನ್‌. ತಿಳಿಸಿದರು.

ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರೈತರಿಗೆ ಹೊಸ ತಂತ್ರಜ್ಞಾನದ ಪೂರ್ಣ ಉಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಕೊರತೆ ನೀಗಿಸಲು ಮಂಡ್ಯದಲ್ಲಿ 2013ರಲ್ಲಿ ಭೂಮಿ ವೇದಿಕೆ ಸ್ಥಾಪಿಸಿದೆವು. ಇದರ ಮೂಲಕ ರಾಜ್ಯದ 8 ಜಿಲ್ಲೆಗಳಲ್ಲಿ 150 ಕೇಂದ್ರ ಸ್ಥಾಪಿಸಲಾಗಿದೆ’ ಎಂದರು.

‘ಸ್ಥಳೀಯ ಕೇಂದ್ರಗಳ ಮೂಲಕ ರೈತರು ಕೃಷಿ ಸಾಮಗ್ರಿಗಳನ್ನು ಕಾಯ್ದಿರಿಸಬಹುದು. ಬೆಳೆಗಳ ಬಗ್ಗೆ, ಕೀಟ ಬಾಧೆಯಿಂದ ರಕ್ಷಣೆ ಪಡೆಯುವ ಬಗ್ಗೆ ಮಾಹಿತಿ ಪಡೆಯಬಹುದು. ಅವರ ಮೊಬೈಲ್‌ಗಳಿಗೆ ಸಂದೇಶ ರವಾನಿಸುವ ಸೌಲಭ್ಯವೂ ಇದೆ. ರೈತರು ಬಿತ್ತನೆಯಿಂದ ಕಟಾವಿನವರೆಗಿನ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಹಂಚಿಕೊಳ್ಳಬಹುದು. ಕೃಷಿ ಉತ್ಪನ್ನ ಖರೀದಿ ಮಾಡುವವರಿಗೆ ಈ ಮಾಹಿತಿ ರವಾನಿಸಲಾಗುತ್ತದೆ. ಇದು ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳಲು ರೈತರಿಗೆ ನೆರವಾಗಲಿದೆ’ ಎಂದು ತಿಳಿಸಿದರು.

ಸಂಪರ್ಕಕ್ಕೆ: 080 45458989

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry