ಈ ದಿನ ಜನ್ಮದಿನ

7

ಈ ದಿನ ಜನ್ಮದಿನ

Published:
Updated:
ಈ ದಿನ ಜನ್ಮದಿನ

ಸಂಗೀತ ಒಲವಿನ ಮನೋಮೂರ್ತಿ

‘ಮುಂಗಾರುಮಳೆಯೇ, ಏನು ನಿನ್ನ ಹನಿಗಳ ಲೀಲೇ...’

‘ಮುಂಗಾರುಮಳೆ’ ಚಿತ್ರದ ಹಾಡು ಇಂದಿಗೂ ಎಫ್‌ಎಂ ಚಾನೆಲ್‌ಗಳು, ರಿಯಾಲಿಟಿ ಶೋಗಳಲ್ಲಿ ಕೇಳಿ ಬರುತ್ತಲೇ ಇರುತ್ತದೆ. ಈ ಹಾಡು ಜನಪ್ರಿಯವಾಗಲು ಭಾವುಕ ಸಾಹಿತ್ಯದ ಜೊತೆಗೆ ಮನೋಜ್ಞ ಸಂಗೀತವೂ ಕಾರಣ. ಈ ಹಾಡಿಗೆ ಸಂಗೀತ ಕೊಟ್ಟವರು ಮನೋಮೂರ್ತಿ.

ಕನ್ನಡ ಚಿತ್ರರಂಗದಲ್ಲಿ ತಮ್ಮ ಸಂಗೀತ ಸಂಯೋಜನೆಯಿಂದ ಗುರುತಿಸಿಕೊಂಡವರು ಮನೋಮೂರ್ತಿ. ಸಂಗೀತ ಸಂಯೋಜಕ, ನೆಟ್‌ವರ್ಕ್‌ ಎಂಜಿಯರ್‌ ಆಗಿಯೂ ಅವರು ಚಿರಪರಿಚಿತರು. ಚಿಕ್ಕಂದಿನಿಂದಲೂ ಸಂಗೀತದ ಬಗೆಗೆ ವಿಶೇಷ ಆಸಕ್ತಿ ಇದ್ದ ಮನೋಮೂರ್ತಿ ‘ಅಮೆರಿಕಾ ಅಮೆರಿಕಾ’ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುವ ಮೂಲಕ ಸಿನಿಮಾ ಜಗತ್ತಿಗೆ ಪದಾರ್ಪಣೆ ಮಾಡಿದರು.

ಈ ಚಿತ್ರದ ‘ನೂರು ಜನ್ಮಕು’, ನನ್ನ ಪ್ರೀತಿಯ ಹುಡುಗಿ ಚಿತ್ರದ ‘ಕಾರ್‌ ಕಾರ್‌’ ಹಾಡು ಜನಪ್ರಿಯತೆ ಗಳಿಸಿತು. ಮನೋಮೂರ್ತಿ ಸಂಗೀತ ಸಂಯೋಜನೆಯ ಪ್ರೀತಿ ಪ್ರೇಮ ಪ್ರಣಯ, ಜೋಕ್‌ ಫಾಲ್ಸ್‌, ಮುಂಗಾರು ಮಳೆ, ಚೆಲುವಿನ ಚಿತ್ತಾರ ಮುಂತಾದ ಸಿನಿಮಾದ ಹಾಡುಗಳು ಖ್ಯಾತಿ ಗಳಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry