ಪತ್ನಿ ಸತ್ತಿದ್ದಾಳೆ ಎಂದು ಭಾವಿಸಿ ಪತಿ ಆತ್ಮಹತ್ಯೆ

7
ಪತ್ನಿ ಶೀಲ ಶಂಕಿಸಿ ತಲೆ ಹಾಗೂ ಕೈಗಳಿಗೆ ಗಂಭೀರವಾಗಿ ಹಲ್ಲೆ

ಪತ್ನಿ ಸತ್ತಿದ್ದಾಳೆ ಎಂದು ಭಾವಿಸಿ ಪತಿ ಆತ್ಮಹತ್ಯೆ

Published:
Updated:

ಬೆಂಗಳೂರು: ಪತ್ನಿಯ ಶೀಲ ಶಂಕಿಸಿ ಹಲ್ಲೆ ಮಾಡಿದ ಬಳಿಕ ಆಟೊ ಚಾಲಕ ಹೆನ್ರಿ ಫರ್ನಾಂಡಿಸ್ (37) ರಾಮಮೂರ್ತಿ ನಗರದಲ್ಲಿ ಶುಕ್ರವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹಲ್ಲೆಗೊಳಗಾದ ಚಿತ್ರಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಫರ್ನಾಂಡಿಸ್ 10 ವರ್ಷಗಳ ಹಿಂದೆ ಚಿತ್ರಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದರು. ಅವರಿಗೆ ಇಬ್ಬರು ಮಕ್ಕಳು ಇದ್ದಾರೆ.

ಪತ್ನಿಯ ನಡತೆ ಬಗ್ಗೆ ಸಂಶಯ ವ್ಯಕ್ತಪಡಿಸುತ್ತಿದ್ದ ಅವರು, ಅದೇ ವಿಚಾರವಾಗಿ ಜಗಳವಾಡುತ್ತಿದ್ದರು. ಇದರಿಂದ ಬೇಸತ್ತ ಚಿತ್ರಾ ಮಕ್ಕಳೊಂದಿಗೆ 10 ದಿನಗಳ ಹಿಂದೆ ತವರಿಗೆ ಹೋಗಿದ್ದರು ಎಂದು ಕೆ.ಆರ್.ಪುರ ಪೊಲೀಸರು ತಿಳಿಸಿದರು.

ಫರ್ನಾಂಡಿಸ್‌ ಪತ್ನಿಯ ಮನವೊಲಿಸಿ ಶುಕ್ರವಾರ ಮನೆಗೆ ಕರೆದುಕೊಂಡು ಬಂದಿದ್ದರು. ಮಕ್ಕಳನ್ನು ಶಾಲೆಗೆ ಕಳುಹಿಸಿದ ಬಳಿಕ ದಂಪತಿ ನಡುವೆ ಮತ್ತೆ ಜಗಳ ಶುರುವಾಗಿತ್ತು. ಕತ್ತಿಯಿಂದ ಚಿತ್ರಾ ಅವರ ತಲೆ ಹಾಗೂ ಕೈಗಳಿಗೆ ಹೊಡೆದಿದ್ದರು. ಪತ್ನಿ ಪ್ರಜ್ಞೆ ಕಳೆದುಕೊಂಡು ಕೆಳಗೆ ಕುಸಿದು ಬಿದ್ದಿದ್ದರು. ಇದರಿಂದ ಆತಂಕಗೊಂಡ ಫರ್ನಾಂಡಿಸ್, ಪತ್ನಿ ಸತ್ತು ಹೋಗಿದ್ದಾಳೆ ಎಂದು ಭಾವಿಸಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದಾರೆ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry