ಒಂಚೂರು

7

ಒಂಚೂರು

Published:
Updated:

ನಾಯಿ ಅಸ್ತಿ ವಜ್ರವಾದಾಗ...

ಇಂಗ್ಲೆಂಡ್‌ನಲ್ಲಿ ನಾಯಿಗಳ ಮಾಲೀಕರು ತಮ್ಮಿಷ್ಟದ ಪ್ರಾಣಿ ಮೃತಪಟ್ಟ ಮೇಲೂ ಅದನ್ನು ವಜ್ರವಾಗಿ ಬದಲಾಯಿಸಿ, ಅದರ ಹೆಸರನ್ನು ನೆನಪಿನಲ್ಲಿಟ್ಟುಕೊಳ್ಳಬಹುದು! ಹರ್ಟ್‌ಫೋರ್ಡ್‌ಷೈರ್‌ನ ಸ್ಮಶಾನದಲ್ಲಿನ ಅಸ್ಥಿಗಳಿಂದ ಇಂಗಾಲವನ್ನು ತೆಗೆದು ವಜ್ರವಾಗಿ ಪರಿವರ್ತಿಸುವ ಪ್ರಕ್ರಿಯೆ ಶುರುವಾಗಿದೆ. ವಜ್ರದ ಗಾತ್ರದ ಆಧಾರದ ಮೇಲೆ 2000 ಪೌಂಡ್‌ನಿಂದ 15,000 ಪೌಂಡ್‌ನಷ್ಟು ದರವನ್ನು ನಿಗದಿಪಡಿಸುತ್ತಾರೆ.

ಮೊಸಳೆಗೆ ಅರಿಕೆ

ಆಫ್ರಿಕಾ ಪೂರ್ವ ಕರಾವಳಿಯ ಮಡಗಾಸ್ಕರ್‌ನ ಇಟಸಿಯಲ್ಲಿನ ಕೊಳದ ಬಳಿ ವಾಸಿಸುವ ಮೂಲವಾಸಿಗಳು ಮೊಸಳೆಗಳಿಗೆ ವರ್ಷಕ್ಕೊಮ್ಮೆ ಅರಿಕೆ ಮಾಡಿಕೊಳ್ಳುತ್ತಾರೆ. ‘ಒಳ್ಳೆಯ ಮೊಸಳೆಗಳೇ, ನಮ್ಮ ತಂಟೆಗೆ ಬಾರದೆ ನಿಮ್ಮ ಪಾಡಿಗೆ ನೀವು ಇರಿ. ಮನುಷ್ಯರನ್ನು ಕೆಣಕುವ ನಿಮ್ಮ ಕೆಟ್ಟ ಬಂಧುಗಳನ್ನು ಮಾತ್ರ ನಾವು ಸುಮ್ಮನೆ ಬಿಡುವುದಿಲ್ಲ’ ಎಂದು ಎಚ್ಚರಿಸುತ್ತಾ, ಕೈಮುಗಿದು ಅರಿಕೆ ಮಾಡಿಕೊಳ್ಳುವುದು ರೂಢಿ. ಮೊಸಳೆಗಳು ತಮ್ಮ ಪೂರ್ವಜರು ಎಂಬ ನಂಬಿಕೆ ಈ ಜನರಲ್ಲಿ ಇದ್ದು, ಅವನ್ನು ಸಹೋದರರಂತೆ ಭಾವಿಸುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry