ಸಾಮರ್ಥ್ಯ ಪರೀಕ್ಷಿಸಲು ಭಾರತಕ್ಕೆ ಸ್ವಾಗತ: ಪಾಕ್ ವಿದೇಶಾಂಗ ಸಚಿವ ಸವಾಲು

7

ಸಾಮರ್ಥ್ಯ ಪರೀಕ್ಷಿಸಲು ಭಾರತಕ್ಕೆ ಸ್ವಾಗತ: ಪಾಕ್ ವಿದೇಶಾಂಗ ಸಚಿವ ಸವಾಲು

Published:
Updated:
ಸಾಮರ್ಥ್ಯ ಪರೀಕ್ಷಿಸಲು ಭಾರತಕ್ಕೆ ಸ್ವಾಗತ: ಪಾಕ್ ವಿದೇಶಾಂಗ ಸಚಿವ ಸವಾಲು

ಇಸ್ಲಾಮಾಬಾದ್‌: ಗಡಿ ದಾಟಿ ಪಾಕಿಸ್ತಾನದ ವಿರುದ್ಧ ಹೋರಾಡಬೇಕಾದ ಸಂದರ್ಭ ಬಂದರೆ ಅವರ ಅಣ್ವಸ್ತ್ರ ಸವಾಲನ್ನೂ ಎದುರಿಸಲು ಸಿದ್ಧ ಎಂಬ ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಹೇಳಿಕೆಗೆ ಪಾಕಿಸ್ತಾನ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.

‘ಬಿಪಿನ್ ರಾವತ್ ಹೇಳಿಕೆ ಪರಮಾಣು ಸಮರಕ್ಕೆ ನೀಡಿದ ಕರೆ’ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಖ್ವಾಜಾ ಮೊಹಮ್ಮದ್ ಆಸಿಫ್ ಹೇಳಿದ್ದಾರೆ.

ಬಿಪಿನ್ ಹೇಳಿಕೆಗೆ ಟ್ವಿಟರ್‌ನಲ್ಲಿ ಪ್ರತಿಕ್ರಿಯೆ ನೀಡಿರುವ ಖ್ವಾಜಾ, ‘ಭಾರತೀಯ ಸೇನಾ ಮುಖ್ಯಸ್ಥರ ಬೇಜವಾಬ್ದಾರಿಯುತ ಮತ್ತು ಅವರ ಘನತೆಗೆ ತಕ್ಕುದಲ್ಲದ ಹೇಳಿಕೆ ಇದಾಗಿದೆ. ಇದರಿಂದ ಪರಮಾಣು ಸಮರಕ್ಕೆ ಕರೆ ನೀಡಿದಂತೆ. ಇದನ್ನೇ ಅವರು ಬಯಸುತ್ತಾರೆ ಎಂದಾದಲ್ಲಿ ನಮ್ಮನ್ನು ಪರೀಕ್ಷಿಸಲು ಅವರಿಗೆ ಸ್ವಾಗತವಿದೆ. ಅವರ ಅನುಮಾನವನ್ನು ಪರಿಹರಿಸಲಾಗುವುದು, ಇನ್‌ಶಾಲ್ಲಾಹ್’ ಎಂದು ಉಲ್ಲೇಖಿಸಿದ್ದಾರೆ.

ಬಿಪಿನ್ ರಾವತ್ ಹೇಳಿದ್ದೇನು?: ಶುಕ್ರವಾರ ಮಾತನಾಡಿದ್ದ ಬಿಪಿನ್ ರಾವತ್ ಅವರು, ಅಗತ್ಯವೆಂದೆನಿಸಿದಲ್ಲಿ ಪಾಕಿಸ್ತಾನದ ಪರಮಾಣು ಶಕ್ತಿಯನ್ನು ಎದುರಿಸಲು ಸಿದ್ಧ ಎಂದು ಹೇಳಿದ್ದರು.

‘ನಿಜವಾಗಿಯೂ ಪಾಕಿಸ್ತಾನವನ್ನು ಎದುರಿಸಬೇಕಾಗಿ ಬಂದಲ್ಲಿ ಮತ್ತು ಸರ್ಕಾರ ನಮಗೆ ಆ ಸೂಚನೆ ನೀಡಿದಲ್ಲಿ, ಅವರ ಬಳಿ ಅಣ್ವಸ್ತ್ರ ಇದೆ ಎಂಬ ಕಾರಣಕ್ಕೆ ಗಡಿ ದಾಟಿ ದಾಳಿ ಮಾಡುವುದಿಲ್ಲ ಎಂದು ನಾವು ಹೇಳಲಾರೆವು. ಅವರ ಅಣ್ವಸ್ತ್ರ ಸವಾಲನ್ನು ಎದುರಿಸಲು ಸಿದ್ಧರಿದ್ದೇವೆ’ ಎಂದು ರಾವತ್ ಹೇಳಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry