ಸೆಮಿಫೈನಲ್‌ಗೆ ಭಾರತ

7

ಸೆಮಿಫೈನಲ್‌ಗೆ ಭಾರತ

Published:
Updated:
ಸೆಮಿಫೈನಲ್‌ಗೆ ಭಾರತ

ದುಬೈ: ಅಜಯ್ ಗರಿಯಾ (54) ಅವರ ಅರ್ಧಶತಕದ ನೆರವಿನಿಂದ ಭಾರತ ತಂಡ ನೇಪಾಳ ವಿರುದ್ಧದ ಪಂದ್ಯದಲ್ಲಿ ಜಯದಾಖಲಿಸುವ ಮೂಲಕ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ.

ಅಂಧರ ಐದನೇ ವಿಶ್ವಕಪ್ ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಎಂಟು ವಿಕೆಟ್‌ಗಳಿಂದ ನೇಪಾಳ ಎದುರು ಗೆದ್ದಿದೆ.

ಟಾಸ್‌ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ನೇಪಾಳ ತಂಡ 37.5 ಓವರ್‌ಗಳಲ್ಲಿ 156 ರನ್ ಕಲೆಹಾಕಿತು. ಪ್ರಕಾಶ್ ಜಯರಾಮಯ್ಯ 22 ರನ್‌ಗಳಿಗೆ ಎರಡು ವಿಕೆಟ್ ಪಡೆದುಕೊಂಡರು.

ನಾಯಕ ಅಜಯ್ ರೆಡ್ಡಿ, ರಾಮ್‌ಬೀರ್, ಪ್ರೇಮ್‌ ಕುಮಾರ್‌, ಜಾಫರ್ ಇಕ್ಬಾಲ್‌ ತಲಾ ಒಂದು ವಿಕೆಟ್ ಪಡೆದುಕೊಂಡರು.

ಬಳಿಕ ಭಾರತ ತಂಡ ಕೇವಲ ಎರಡು ವಿಕೆಟ್‌ ಕಳೆದುಕೊಂಡು ಸುಲಭದಲ್ಲಿ ಗುರಿ ತಲುಪಿತು. ಅಜಯ್ ಗರಿಯಾ (54, 29ಎ, 4ಬೌಂ) ಪಂದ್ಯ ಶ್ರೇಷ್ಠ ಗೌರವ ಪಡೆದುಕೊಂಡರು. ಮಹೇಂದರ್ ಔಟಾಗದೆ 30 ಎಸೆತಗಳಲ್ಲಿ 40ರನ್ ದಾಖಲಿಸಿದರು. ರಾಮ್‌ಬೀರ್‌ (38, 23ಎ) ರನ್ ವೇಗ ಹೆಚ್ಚಿಸಿದರು.

ಜನವರಿ 17ರಂದು ಅಜ್ಮನ್‌ ಓವಲ್ಸ್‌ನಲ್ಲಿ ನಡೆಯುವ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ಎದುರು ಆಡಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry