ಬಿಎಸ್ಎಫ್ ಯೋಧ ಸಾವು

7

ಬಿಎಸ್ಎಫ್ ಯೋಧ ಸಾವು

Published:
Updated:
ಬಿಎಸ್ಎಫ್ ಯೋಧ ಸಾವು

ಅಥಣಿ (ಬೆಳಗಾವಿ ಜಿಲ್ಲೆ):   ಬಿಎಸ್ಎಫ್ ಯೋಧ, ತಾಲ್ಲೂಕಿನ ಬಳವಾಡ ಗ್ರಾಮದ ಗುರುಲಿಂಗ ಮಲ್ಲಪ್ಪ ಶಬರದ (48) ಗುವಾಹಟಿಯಲ್ಲಿ ಭಾನುವಾರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

1991 ರಲ್ಲಿ ಬಿಎಸ್ಎಫ್ ಸೇರ್ಪಡೆಯಾದ ಶಬರದ,  ದೇಶದ ನಾನಾ ಭಾಗಗಳಲ್ಲಿ ಕಾರ್ಯನಿರ್ವಹಿಸಿ, ಇತ್ತೀಚೆಗಷ್ಟೇ ಹವಾಲ್ದಾರ್ ಆಗಿ ಬಡ್ತಿ ಪಡೆದು ಗುವಾಹಟಿಗೆ ವರ್ಗಾವಣೆಗೊಂಡಿದ್ದರು. ಯೋಧನ ಪಾರ್ಥಿವ ಶರೀರ ಮಂಗಳವಾರ ಸ್ವಗ್ರಾಮ ಬಳವಾಡಕ್ಕೆ ತಲುಪುವ ನಿರೀಕ್ಷೆ ಇದೆ ಎಂದು ಕುಟುಂಬದವರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry