ಐ ಲೀಗ್‌: ಚರ್ಚಿಲ್‌ ಬ್ರದರ್ಸ್‌ಗೆ ಜಯ

7

ಐ ಲೀಗ್‌: ಚರ್ಚಿಲ್‌ ಬ್ರದರ್ಸ್‌ಗೆ ಜಯ

Published:
Updated:

ಕೋಯಿಕ್ಕೋಡ್‌: ಕಲು ಒಗ್ಬಾ ಕಾಲ್ಚಳಕದಲ್ಲಿ ಅರಳಿದ ಎರಡು ಗೋಲುಗಳ ಬಲದಿಂದ ಚರ್ಚಿಲ್‌ ಬ್ರದರ್ಸ್‌ ಎಫ್‌ಸಿ ತಂಡ ಐ ಲೀಗ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಗೆದ್ದಿದೆ.

ಸೋಮವಾರ ನಡೆದ ಹೋರಾಟದಲ್ಲಿ ಚರ್ಚಿಲ್‌ 3–2 ಗೋಲುಗಳಿಂದ ಗೋಕುಲಮ್‌ ಕೇರಳ ಎಫ್‌ಸಿ ತಂಡವನ್ನು ಮಣಿಸಿತು.

ಚರ್ಚಿಲ್‌ ತಂಡದ ಕಲು 16ನೇ ನಿಮಿಷದಲ್ಲಿ ಗೋಲು ಬಾರಿಸಿದರು. 59ನೇ ನಿಮಿಷದಲ್ಲಿ ಕೇರಳ ತಂಡದ ಡೇನಿಯಲ್‌ ಆ್ಯಡೊ ಚೆಂಡನ್ನು ಗುರಿ ಸೇರಿಸಿ 1–1ರ ಸಮಬಲಕ್ಕೆ ಕಾರಣರಾದರು. 70ನೇ ನಿಮಿಷದಲ್ಲಿ ಎಮಾನುಯೆಲ್‌ ಚಿಗೊಜಿ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟಿದ್ದರಿಂದ ಗೋಕುಲಮ್‌ ತಂಡ ಜಯದ ಕನಸು ಕಂಡಿತ್ತು. ಆದರೆ ಚರ್ಚಿಲ್‌ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry