‘ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ ದೇಶ ರಕ್ಷಣೆಯಷ್ಟೇ ಮಹತ್ವದ್ದು’

7

‘ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ ದೇಶ ರಕ್ಷಣೆಯಷ್ಟೇ ಮಹತ್ವದ್ದು’

Published:
Updated:

ಮಂಗಳೂರು: ಸಾಂವಿಧಾನಿಕ ಸಂಸ್ಥೆಗಳ ರಕ್ಷಣೆ ದೇಶರಕ್ಷಣೆಯಷ್ಟೇ ಮಹ ತ್ವದ್ದಾಗಿದೆ. ನ್ಯಾಯಾಂಗದ ರಕ್ಷಣೆಗೆ ಮುಂದಾದ ನ್ಯಾಯಮೂರ್ತಿ ಗಳಿಗೆ ಅಹಿಂದ ಬೆಂಬಲ ನೀಡುತ್ತದೆ ಎಂದು ಅಹಿಂದ ಜನ ಚಳವಳಿಯ ಉಪಾಧ್ಯಕ್ಷ ಬಿ. ಎ ಮಹಮ್ಮದ್‌ ಹನೀಫ್‌ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಇತ್ತೀಚೆಗೆ ಸರ್ವೋಚ್ಛ ನ್ಯಾಯಾಲಯದ ನಾಲ್ವರು ಹಿರಿಯ ನ್ಯಾಯಮೂರ್ತಿಗಳು ಮಾಧ್ಯಮದ ಎದುರಿಗೆ ಬಂದು ಸಂವಿಧಾನದ ಮೌಲ್ಯಗಳನ್ನು ಹಾಗೂ ಸುಪ್ರೀಂ ಕೋರ್ಟ್‌ ನ್ಯಾಯ ಪರತೆಯನ್ನು ರಕ್ಷಿಸುವಂತೆ ಕೈ ಮುಗಿದು ಕೇಳಿಕೊಳ್ಳುವ ಮೂಲಕ ದೇಶವು ಭೀಕರ ಸನ್ನಿವೇಶವನ್ನು ಎದುರಿಸುತ್ತದೆ ಎಂದು ಹೇಳಿದ್ದರು. ಆದ್ದರಿಂದ ದೇಶದಲ್ಲಿ ಸಾಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವಂತೆ ಚುನಾಯಿತ ಸರ್ಕಾರಗಳು, ರಾಷ್ಟ್ರಪತಿ, ರಾಜ್ಯಪಾಲರು ಹಾಗೂ ದೇಶದ ಉನ್ನತ ನ್ಯಾಯಾಲಯಗಳು ಸಾಂವಿಧಾನಿಕ ಕ್ರಮ ಕೈಗೊಳ್ಳಬೇಕು’ ಎಂದರು.

‘ಉನ್ನತ ನ್ಯಾಯಾಂಗದಲ್ಲಿ ಪ್ರಾತಿನಿಧ್ಯ ಹಾಗೂ ಮೀಸಲಾತಿ ಇಲ್ಲದ ಕಾರಣ ಇಂತಹ ಮೌಲ್ಯಗಳಿಗೆ ಕುಂದುಕೊರತೆ ಉಂಟಾಗುತ್ತಿದ್ದು, ಉನ್ನತ ನ್ಯಾಯಾಲಯ ಸೇರಿದಂತೆ ಎಲ್ಲಾ ವಿಭಾಗಗಳಲ್ಲೂ ಶೇ. 70 ಪ್ರಾತಿನಿಧ್ಯವನ್ನು ಮೀಸಲಾತಿ ಮೂಲಕ ಜಾರಿಗೆ ತರಬೇಕು’ ಎಂದು ಒತ್ತಾಯಿಸಿದರು.

ಅಧ್ಯಕ್ಷ ವಾಸುದೇವ ಬೋಳೂರು, ಪ್ರಧಾನ ಕಾರ್ಯದರ್ಶಿ ಯೂಸುಫ್‌ ವಕ್ತಾರ್‌, ಪದ್ಮನಾಭ ನರಿಂಗಾನ, ವೆಲೇರಿಯನ್‌ ಎಸ್‌. ಆರ್‌. ಲೋಬೊ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry