ಡಿ.31ರಂದು ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿ ಮೇಲೆ ಗುಂಪು ಹಲ್ಲೆ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆ: ಒಬ್ಬನ ಬಂಧನ

7

ಡಿ.31ರಂದು ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿ ಮೇಲೆ ಗುಂಪು ಹಲ್ಲೆ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆ: ಒಬ್ಬನ ಬಂಧನ

Published:
Updated:
ಡಿ.31ರಂದು ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿ ಮೇಲೆ ಗುಂಪು ಹಲ್ಲೆ ದೃಶ್ಯ ಸಿ.ಸಿ ಟಿವಿಯಲ್ಲಿ ಸೆರೆ: ಒಬ್ಬನ ಬಂಧನ

ಬೆಂಗಳೂರು: ಹೊಸ ವರ್ಷಾಚರಣೆ ಹಿಂದಿನ ದಿನ ಡಿ.31ರಂದು ಇಲ್ಲಿನ ಇಂದಿರಾ ನಗರದಲ್ಲಿ ಗುಂಪೊಂದು ನಡು ರಸ್ತೆಯಲ್ಲಿ ‘ಡ್ಯಾನ್ಸ್‘ ಮಾಡಿ, ಈ ವೇಳೆ ಅಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಯುವ ಜೋಡಿಯ ಮೇಲೆ ಹಲ್ಲೆ ಮಾಡಿದೆ.

ಜೋಡಿಯ ಮೇಲೆ ಗುಂಪು ಹಲ್ಲೆ ಮಾಡಿರುವ ದೃಶ್ಯ ಸಿ.ಸಿ ಟಿ.ವಿಯಲ್ಲಿ ಸೆರೆಯಾಗಿದೆ.

ಬೈಕ್‌ನಲ್ಲಿ ಬಂದವರನ್ನು ರಸ್ತೆಯಲ್ಲಿ ಮುಂದೆ ಹೋಗಲು ಅವಕಾಶ ನೀಡದೆ ಹತ್ತಾರು ಜನರ ಗುಂಪು ಅಡ್ಡಗಟ್ಟಿದೆ. ಬೈಕ್‌ ಮೇಲಿನಿಂದ ವ್ಯಕ್ತಿಯನ್ನು ಕೆಳಕ್ಕೆ ಎಳೆದಾಡಿದ್ದಾರೆ, ಆಗ ಬೈಕ್‌ ಸಹ ಕೆಳಕ್ಕೆ ಬಿದ್ದಿದೆ. ಬೀಳುತ್ತಿದ್ದ ಬೈಕ್‌ನಿಂದ ಇಳಿದ ಯುವತಿ ತುಸು ಹಿಂದೆಕ್ಕೆ ಸರಿದು ನಿಂತಿದ್ದಿದ್ದಾರೆ. ಆ ವೇಳೆಗೆ ಗುಂಪು ಯುವಕನ್ನು ಮನಬಂದಂತೆ ಥಳಿಸಿರುವುದು ವಿಡಿಯೊದಲ್ಲಿದೆ.

ಈ ಸಂಬಂಧ ಪೊಲೀಸರು ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry