ಬರ್ತಿದೆ ಪ್ರಿಯಾಂಕಾ ಜೀವನ ಕಥೆ

7

ಬರ್ತಿದೆ ಪ್ರಿಯಾಂಕಾ ಜೀವನ ಕಥೆ

Published:
Updated:
ಬರ್ತಿದೆ ಪ್ರಿಯಾಂಕಾ ಜೀವನ ಕಥೆ

ಜಾಗತಿಕವಾಗಿ ಬೆಳಗುತ್ತಿರುವ ಬಾಲಿವುಡ್ ತಾರೆ ಪ್ರಿಯಾಂಕಾ ಚೋಪ್ರಾ ಅವರ ಜೀವನ ಚರಿತ್ರೆ ಕುರಿತ ಪುಸ್ತಕ ಶೀಘ್ರದಲ್ಲೇ ಬರಲಿದೆ. ಬರೇಲಿಯಿಂದ ಹಾಲಿವುಡ್ ತನಕ ಪ್ರಿಯಾಂಕಾ ಏರಿದ ಎತ್ತರ ಮತ್ತು ಸಾಧನೆಯನ್ನು ಒಳಗೊಂಡಿರುವ ಈ ಪುಸ್ತಕವನ್ನು ಸಿನಿ ಪತ್ರಕರ್ತ ಅಸೀಮ್ ಛಾಬ್ರಾ ಬರೆಯುತ್ತಿದ್ದಾರಂತೆ.

ಅಸೀಮ್ ಈಗಾಗಲೇ ಬಾಲಿವುಡ್‌ನ ಹಿರಿಯ ನಟ ಶಶಿಕಪೂರ್ ಕುರಿತು ಜೀವನ ಚರಿತ್ರೆ ಬರೆದು ಪ್ರಸಿದ್ಧಿ ಪಡೆದಿದ್ದಾರೆ. ಈಗ ಪ್ರಿಯಾಂಕಾ ಚೋಪ್ರಾರ ಜೀವನ ಚರಿತ್ರೆ ಬರೆಯುತ್ತಿರುವ ಅಸೀಮ್, ಕೃತಿಯಲ್ಲಿ ತೆರೆಯ ಹಿಂದಿನ ಪ್ರಿಯಾಂಕ ಬದುಕು ಹೇಗಿತ್ತು? ಪ್ರಿಯಾಂಕಾ ಬಾಲಿವುಡ್‌ನಲ್ಲಿ ಸ್ಥಾನ ಗಳಿಸಿದ್ದು ಹೇಗೆ, ಪಿಗ್ಗಿ ಜತೆ ಕೆಲಸ ಮಾಡಿದವರ ಅನುಭವ... ಇತ್ಯಾದಿ ಕುರಿತು ಬೆಳಕು ಚೆಲ್ಲಲಿದ್ದಾರಂತೆ.

ಈ ಕೃತಿಯಲ್ಲಿ ಅಪ್ಪಿತಪ್ಪಿಯೂ ಪ್ರಿಯಾಂಕಾಳ ಪ್ರೇಮ ಕಥನವನ್ನು ಮಾತ್ರ ಉಲ್ಲೇಖಿಸುವುದಿಲ್ಲ ಎಂದು ಅಸೀಮ್ ಸ್ಪಷ್ಟವಾಗಿ ಹೇಳಿದ್ದಾರೆ. ಸದ್ಯಕ್ಕೆ ಪುಸ್ತಕದ ಕುರಿತು ಪ್ರಿಯಾಂಕಾ ಎಲ್ಲೂ ಮಾತನಾಡಿಲ್ಲ. ಈ ಕೃತಿ ಬೇಸಿಗೆಯಲ್ಲಿ ಬಿಡುಗಡೆಯಾಗಲಿದೆಯಂತೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry