ಮುಂಬೈನ ನಾರಿಮನ್‌ ಹೌಸ್‌ನಲ್ಲಿ ಬೆಂಜಾಮಿನ್‌ ನೆತನ್ಯಾಹು–ಮೊಶೆ ಭೇಟಿ

7

ಮುಂಬೈನ ನಾರಿಮನ್‌ ಹೌಸ್‌ನಲ್ಲಿ ಬೆಂಜಾಮಿನ್‌ ನೆತನ್ಯಾಹು–ಮೊಶೆ ಭೇಟಿ

Published:
Updated:
ಮುಂಬೈನ ನಾರಿಮನ್‌ ಹೌಸ್‌ನಲ್ಲಿ ಬೆಂಜಾಮಿನ್‌ ನೆತನ್ಯಾಹು–ಮೊಶೆ ಭೇಟಿ

ಮುಂಬೈ: 26/11ರ ಮುಂಬೈ ದಾಳಿಯಲ್ಲಿ ತಂದೆ ಮತ್ತು ತಾಯಿಯನ್ನು ಕಳೆದುಕೊಂಡಿದ್ದ ಇಸ್ರೇಲ್‌ ಬಾಲಕ ಮೊಶೆ ಹೋಲ್ಟ್ಜ್‌ಬರ್ಗ್‌, ಒಂಬತ್ತು ವರ್ಷಗಳ ನಂತರ ಮುಂಬೈಗೆ ಬಂದಿದ್ದು, ಗುರುವಾರ ನಾರಿಮನ್‌ ಹೌಸ್‌ನಲ್ಲಿ ಇಸ್ರೇಲ್‌ ಪ್ರಧಾನಿ ಬೆಂಜಾಮಿನ್‌ ನೆತನ್ಯಾಹು ಅವರನ್ನು ಭೇಟಿಯಾಗಿದ್ದಾನೆ. 

ಬಾಲಕ ಮೊಶೆಯ ಜತೆಗೆ ಬೆಂಜಾಮಿನ್‌ ನೆತನ್ಯಾಹು ಅವರು ನಗುನಗುತ್ತಲೆ ಕುಶಲೋಪರಿ ನಡೆಸಿದರು.

ಮೊಶೆಯ ಹಣೆಗೆ ಮುತ್ತಿಟ್ಟು, ಹೆಗಲ ಮೇಲೆ ಕೈಹಾಕಿ, ಮೈದವಡಿ ಸ್ನೇಹಪರದಿಂದಲೇ ನೆತನ್ಯಾಹು ಮಾತನಾಡಿದರು.

ಪತ್ನಿಯ ಜತೆ ಭಾರತ ಪ್ರವಾಸ ಕೈಗೊಂಡಿರುವ ಬೆಂಜಾಮಿನ್‌ ನೆತನ್ಯಾಹು ನಾರಿಮನ್‌ ಹೌಸ್‌ನಲ್ಲಿ 26/11 ದಾಳಿ ಸಂತ್ರಸ್ತರ ಸ್ಮಾರಕವನ್ನು ಅನಾವರಣ ಮಾಡಲಿದ್ದಾರೆ. ಆ ಕಾರ್ಯಕ್ರಮದಲ್ಲಿ ಮೊಶೆಯೂ ಭಾಗವಹಿಸಲಿದ್ದಾನೆ.

ಮಂಗಳವಾರ ಬೆಳಿಗ್ಗೆ ಮುಂಬೈ ವಿಮಾನನಿಲ್ದಾಣದಲ್ಲಿ ಇಳಿದ ತಕ್ಷಣ, ‘ಶಾಲೋಮ್‌... ಬಹುತ್‌ ಖುಷಿ’ (ತುಂಬಾ ಖುಷಿಯಾಗಿದೆ) ಎಂದು ಮೊಶೆ ಹಿಂದಿಯಲ್ಲಿ ಹೇಳಿದ್ದ.

ಮೊಶೆಗೆ ಈಗ 11ರ ಹರೆಯ. ಪಾಕಿಸ್ತಾನದ ಉಗ್ರರು ಮುಂಬೈ ಮೇಲೆ ದಾಳಿ ನಡೆಸಿದ್ದಾಗ ಆತ ಎರಡು ವರ್ಷದ ಕಂದನಾಗಿದ್ದ. 2008ರ ನವೆಂಬರ್‌ 26ರಂದು ನಾರಿಮನ್‌ ಹೌಸ್‌ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದಾಗ ಮೊಶೆ ಅಪ್ಪ ಗೇವ್ರಿಯಲ್‌ ಮತ್ತು ತಾಯಿ ರಿವ್ಕಾ ಹೋಲ್ಟ್ಜ್‌ಬರ್ಗ್‌ ಸೇರಿ ಆರು ಮಂದಿ ಮೃತಪಟ್ಟಿದ್ದರು.

ಮೊಶೆಯನ್ನು ಭಾರತೀಯ ದಾದಿ ಸಾಂಡ್ರಾ ಸಾಮ್ಯುಯೆಲ್ಸ್‌ ರಕ್ಷಿಸಿದ್ದರು. ಈಗ ಅವನು ಅಜ್ಜ ಅಜ್ಜಿಯೊಂದಿಗೆ ಇಸ್ರೇಲ್‌ನಲ್ಲಿ ನೆಲೆಸಿದ್ದಾನೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry