ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಪ್ರಚಾರಕ್ಕೆ ಆಲಂಕಾರಿಕ ವಾಹನ!

Last Updated 18 ಜನವರಿ 2018, 20:17 IST
ಅಕ್ಷರ ಗಾತ್ರ

ಬೆಂಗಳೂರು: ಕಿರಿದಾದ ರಸ್ತೆಗಳಲ್ಲೂ ಸಂಚರಿಸಿ ಚುನಾವಣಾ ಪ್ರಚಾರ ಕೈಗೊಳ್ಳಲು ಅನುಕೂಲವಾಗುವಂತೆ ಅಲಂಕಾರಿಕ ವಾಹನ ಸಿದ್ಧಪಡಿಸಿಕೊಡುವ ಕಂಪೆನಿಯೊಂದು ರಾಜಕೀಯ ಪಕ್ಷಗಳ ಕಚೇರಿಗಳ ಕದ ತಟ್ಟಿದೆ.

ಬಿಜೆಪಿ ಕಚೇರಿಯೆದುರು ಗುರುವಾರ ನಿಂತಿದ್ದ ವಾಹನವೊಂದು ಎಲ್ಲರ ಗಮನ ಸೆಳೆಯಿತು. ಇಸುಜು ವಾಹನಕ್ಕೆ ಬೆಂಗಳೂರಿನ ಸಂಸ್ಥೆಯೊಂದು ಅಲಂಕಾರ ಮಾಡಿ ಕೊಡುತ್ತಿದ್ದು, ಪ್ರಚಾರ ವಾಹನ ಬಯಸುವ ಪಕ್ಷಗಳ ಪದಾಧಿಕಾರಿಗಳನ್ನು ಭೇಟಿಯಾಗುತ್ತಿದ್ದಾರೆ.

ಈ ವಾಹನಗಳಲ್ಲಿ ಅಭ್ಯರ್ಥಿಗಳು ಬಯಸುವ ಬಣ್ಣ, ರಾಜಕಾರಣಿಗಳ ಚಿತ್ರ ಮತ್ತು ಘೋಷಣೆಗಳನ್ನು ಹಾಕಿಕೊಡಲಾಗುತ್ತದೆ. ಮಾದರಿ ವಾಹನ ದಲ್ಲಿ ಒಂದು ಕಿ.ಮೀ ತನಕ  ಧ್ವನಿ ಕೇಳಿಸುವ 250 ವ್ಯಾಟ್‌ನ ಆರು ಸ್ಪೀಕರ್‌ಗಳನ್ನು ಮತ್ತು ದೂರದವರೆಗೆ ಬೆಳಕು ಹರಿಸಬಲ್ಲ ಎಂಟು ಎಲ್‌ಇಡಿ ಲೈಟ್ ಅಳವಡಿಸಲಾಗಿದೆ. ವಿದ್ಯುತ್ ‌ಪೂರೈಸಲು ಒಂದು ಕಿಲೋವ್ಯಾಟ್ ಸಾಮರ್ಥ್ಯದ ಜನರೇಟರ್‌ ಈ ವಾಹನದಲ್ಲಿದೆ.

ಈ ವಾಹನದ ಮಾರುಕಟ್ಟೆ ದರ ₹ 9.10 ಲಕ್ಷ. ಚುನಾವಣಾ ಪ್ರಚಾರಕ್ಕೆ ಅಗತ್ಯವಾದ ವ್ಯವಸ್ಥೆ ಅಳವಡಿಸಲು ತಗಲುವ ವೆಚ್ಚ ಸೇರಿ ಒಟ್ಟು ₹ 13.2 ಲಕ್ಷ ನೀಡಿದರೆ ವಾಹನದ ನೋಂದಣಿಯನ್ನೂ ಮಾಡಿಕೊಡಲಾಗುವುದು ಎಂದು ಈ ಸಂಸ್ಥೆಯ ಪ್ರತಿನಿಧಿ ತಿಳಿಸಿದರು.

ಕೆಲವು ಶಾಸಕರು ಈಗಾಗಲೇ ಮುಂಗಡ ಹಣ ಪಾವತಿಸಿ ಕಾಯ್ದಿರಿಸಿದ್ದಾರೆ. 20 ಜನರ ಜೊತೆ ಮಾತುಕತೆ ನಡೆಯುತ್ತಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT