ಸದಾಶಿವ ಆಯೋಗದ ವರದಿ ಯಥಾವತ್‌ ಜಾರಿಗೆ ಒತ್ತಾಯ

7

ಸದಾಶಿವ ಆಯೋಗದ ವರದಿ ಯಥಾವತ್‌ ಜಾರಿಗೆ ಒತ್ತಾಯ

Published:
Updated:

ಬೆಂಗಳೂರು: ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು ಎಂದು ಕರ್ನಾಟಕ ಮಾದಿಗರ ಸಂಘಟನೆಗಳ ಸ್ವಾಭಿಮಾನದ ಒಕ್ಕೂಟ ಒತ್ತಾಯಿಸಿದೆ.

ಗುರುವಾರ ಇಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾದಿಗ ಮೀಸಲಾತಿ ಹೋರಾಟ (ಸಂಸ್ಥಾಪಕ) ಸಮಿತಿ ಅಧ್ಯಕ್ಷ ಕೇಶವಮೂರ್ತಿ, ‘ಎಡಗೈ ಮತ್ತು ಬಲಗೈ ಸಮುದಾಯಗಳು ಒಳ ಮೀಸಲಾತಿಯನ್ನು ತಲಾ ಶೇ 5.5ರಂತೆ ಹಂಚಿಕೊಳ್ಳಲು ಮುಂದಾಗಿವೆ. ಇದನ್ನು ಖಂಡಿಸುತ್ತೇವೆ. ಈ ವರದಿ ಕೇವಲ ಎಡಗೈ ಮತ್ತು ಬಲಗೈ ಸಮುದಾಯಗಳಿಗೆ ಸೀಮಿತವಾಗಿಲ್ಲ. ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿರುವ ಅನೇಕ ಶೋಷಿತ ಸಮುದಾಯಗಳ ಸ್ಥಿತಿಗತಿಗಳನ್ನು ಪರಿಶೀಲಿಸಿ ನೀಡಿರುವ ವರದಿ ಇದು’ ಎಂದರು.

ಕೆಲವೇ ಸಮುದಾಯಗಳ ಒತ್ತಡಕ್ಕೆ ಮಣಿದು ರಾಜಕೀಯ ಉದ್ದೇಶದಿಂದ ವರದಿಯ ಶಿಫಾರಸುಗಳಲ್ಲಿ ಬದಲಾವಣೆ ಮಾಡಿದರೆ ಮುಂದೆ ಆಗುವ ಅನಾಹುತಕ್ಕೆ ಮುಖ್ಯಮಂತ್ರಿಯೇ ನೇರ ಹೊಣೆ ಎಂದು ಎಚ್ಚರಿಸಿದರು.

ನ್ಯಾ.ಸದಾಶಿವ ಅವರು ಕಾನೂನಿನ ಚೌಕಟ್ಟಿನಲ್ಲಿ ವೈಜ್ಞಾನಿಕವಾಗಿ ಒಳ ಮೀಸಲಾತಿಯನ್ನು ಹಂಚಿಕೆ ಮಾಡಿದ್ದಾರೆ. ಯಾವ ಆಧಾರದ ಮೇಲೆ ಒಳಮೀಸಲಾತಿಯ ಪ್ರಮಾಣವನ್ನು ಬದಲಿಸುತ್ತೀರಿ ಎಂದು ಮಾದಿಗ ದಂಡೋರ ಸಂಘಟನೆಯ ಸಂಸ್ಥಾಪಕ ಅಧ್ಯಕ್ಷ ಮಾಪಣ್ಣ ಹವನೂರು ಅವರು ಪ್ರಶ್ನಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry