ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ

7

ಕಾಂಗ್ರೆಸ್, ಬಿಜೆಪಿ ತೊರೆದು ಜೆಡಿಎಸ್ ಸೇರ್ಪಡೆ

Published:
Updated:

ಪಿರಿಯಾಪಟ್ಟಣ: ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹರಿಣಿಕುಮಾರಿ ರಂಗಸ್ವಾಮಿ ಹಾಗೂ ಅವರ ಬೆಂಬಲಿ ಗರು ಮತ್ತು ಚಿಟ್ಟೇನಹಳ್ಳಿ ಹಾಗೂ ಹುಣಸೇವಾಡಿ ಗ್ರಾ.ಪಂ ವ್ಯಾಪ್ತಿಯ ಹಲವು ಮುಖಂಡರು ಕಾಂಗ್ರೆಸ್ ಹಾಗೂ ಬಿಜೆಪಿ ತೊರೆದು ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಮಹದೇವ್ ನೇತೃತ್ವದಲ್ಲಿ ಗುರುವಾರ ಜೆಡಿಎಸ್ ಸೇರ್ಪಡೆಗೊಂಡರು.

ಚಿಟ್ಟೇನಹಳ್ಳಿಯಲ್ಲಿ ಜೆಡಿಎಸ್ ಏರ್ಪಡಿಸಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮ ದಲ್ಲಿ ಮಾತನಾಡಿದ ಜೆಡಿಎಸ್ ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಮಹದೇವ್‌, ತಾಲ್ಲೂಕಿನ ಜೆಡಿಎಸ್ ಕಾರ್ಯಕರ್ತರು ಯಾವುದೇ ಅಧಿಕಾರವಿಲ್ಲದೇ ಪಕ್ಷದಲ್ಲೇ ಉಳಿದು ಶಾಸಕ ಕೆ.ವೆಂಕಟೇಶ್ ಅವರಿಗೆ 2018ರ ಚುನಾವಣೆಯಲ್ಲಿ ಪಾಠ ಕಲಿಸಲು ಮುಂದಾಗಿದ್ದಾರೆ. ತಾಲ್ಲೂಕಿನ ವೀರಶೈವ, ಕುರುಬ, ದಲಿತ ಮತ್ತು ಅಲ್ಪಸಂಖ್ಯಾತ ಸಮುದಾಯದ ನೂರಾರು ಜನಪ್ರತಿನಿಧಿಗಳು, ಯುವಕರು, ಮುಖಂಡರು ಜೆಡಿಎಸ್ ಸೇರ್ಪಡೆಗೊಳ್ಳುತ್ತಿರುವುದು ಗೆಲುವಿನ ದಿಕ್ಸೂಚಿಯಾಗಿದೆ ಎಂದರು.

ಪ್ರಜ್ಞಾವಂತ, ವಿದ್ಯಾವಂತ ಮತದಾರರು ಹಣದ ಆಮೀಷಕ್ಕೆ ಒಳಗಾಗದೆ ಸ್ವಾಭಿಮಾನದಿಂದ ಹಕ್ಕು ಚಲಾಯಿಸಿ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಮತ್ತೊಮ್ಮೆ ಅಧಿಕಾರಕ್ಕೆ ತರಬೇಕು ಎಂದು ಮನವಿ ಮಾಡಿದರು. ಶಾಸಕ ಕೆ.ವೆಂಕಟೇಶ್ ತಮ್ಮ ಜತೆಯಲಿ ವಿದ್ಯಾವಂತರು, ಪ್ರಾಮಾಣಿಕರು, ನೇರ ನಡೆನುಡಿಯ ಕಾರ್ಯಕರ್ತರನ್ನು ಇಟ್ಟುಕೊಳ್ಳುವುದಿಲ್ಲ ಎಂದು ವ್ಯಂಗ್ಯವಾಡಿದರು.

ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ರಾಮು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಹರಿಣಿಕುಮಾರಿ ರಂಗಸ್ವಾಮಿ, ಕುರುಬ ಸಮಾಜದ ಯುವ ಮುಖಂಡ ದೊರೆಕೆರೆ ನಾಗೇಂದ್ರ ಮಾತನಾಡಿದರು.

ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ಜಯಕುಮಾರ್, ತಾ.ಪಂ ಸದಸ್ಯ ಎ.ಟಿ.ರಂಗಸ್ವಾಮಿ, ಮೈಮುಲ್ ನಿರ್ದೇಶಕ ಪಿ.ಎಂ.ಪ್ರಸನ್ನ, ಜೆಡಿಎಸ್ ತಾಲ್ಲೂಕು ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಎನ್.ರವಿ, ರಘುನಾಥ್, ಗ್ರಾ.ಪಂ ಮಾಜಿ ಸದಸ್ಯ ರಾಜಣ್ಣ, ಚಂದ್ರಶೇಖರಯ್ಯ, ನಾಗರಾಜ್, ಸೋಮಶೇಖರ್, ಇಬ್ರಾಹಿಂ, ವಿಜಯ್‌ಕುಮಾರ್, ಮಹೇಶ್, ಚಂದ್ರು, ಮುತ್ತಣ್ಣ, ಕೃಷ್ಣಪ್ಪ, ಕೀರ್ತಿಕುಮಾರ್, ತಮ್ಮೇಗೌಡ, ರಾಜಣ್ಣ, ಪುಟ್ಟಸ್ವಾಮಿ, ಹಬೀಬ್ ಖಾನ್ ಇತರರು ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry