ನಾಲತವಾಡದ ಹೋರಿ ಚಾಂಪಿಯನ್..!

7

ನಾಲತವಾಡದ ಹೋರಿ ಚಾಂಪಿಯನ್..!

Published:
Updated:

ವಿಜಯಪುರ: ಮುದ್ದೇಬಿಹಾಳ ತಾಲ್ಲೂಕಿನ ನಾಲತವಾಡದ ರಾಯನಗೌಡ ಮಲ್ಲನಗೌಡ ಚಿತ್ತಾಪುರ ಅವರ ಹಾಲು ಹಲ್ಲಿನ ಹೋರಿ ವಿಜಯಪುರ ಹೊರ ವಲಯದ ತೊರವಿಯಲ್ಲಿ ಸಿದ್ಧೇಶ್ವರ ಜಾತ್ರೆ ಅಂಗವಾಗಿ ನಡೆದ ಜಾನುವಾರು ಜಾತ್ರೆಯ ಚಾಂಪಿಯನ್ ಆಗಿ ಹೊರಹೊಮ್ಮಿತು. ₹ 25,000 ನಗದು ಬಹುಮಾನ ಪಡೆದುಕೊಂಡಿತು.

ಜಾತ್ರೆಯಲ್ಲಿ ಪಾಲ್ಗೊಂಡಿದ್ದ ರಾಸುಗಳಿಗೆ ಬಹುಮಾನ ನೀಡಲಿಕ್ಕಾಗಿಯೇ ನೇಮಿಸಿದ್ದ ಜಾನುವಾರು ತಜ್ಞರ ಸಮಿತಿ ವಿವಿಧ ವಿಭಾಗಗಳಲ್ಲಿ ಆಯ್ಕೆ ಮಾಡಿ ಪ್ರಶಸ್ತಿ ಪ್ರಕಟಿಸಿದೆ. ಮಂಗಳವಾರ ಸಂಜೆ ನಡೆದ ಸಮಾರಂಭದಲ್ಲಿ ಜಾನುವಾರು ಮಾಲೀಕರಿಗೆ ಪ್ರಶಸ್ತಿ ವಿತರಿಸಲಾಯಿತು.

ಜಮಖಂಡಿ ತಾಲ್ಲೂಕಿನ ನಾಗನೂರಿನ ಮಹಾವೀರ ಭೂಪಾಲ ಯಲಗುದ್ರಿ ಅವರ ಎರಡು ಹಲ್ಲಿನ ಹೋರಿ (10 ಗ್ರಾಂ ಚಿನ್ನದ ಪದಕ), ಜಮಖಂಡಿ ತಾಲ್ಲೂಕಿನ ನಾವಲಗಿಯ ಶಿವಪ್ಪ ಗುರುಪಾದಪ್ಪ ಮುಗಳಖೋಡ ಅವರ ನಾಲ್ಕು ಹಲ್ಲಿನ ಹೋರಿ (10 ಗ್ರಾಂ ಚಿನ್ನದ ಪದಕ), ಅಥಣಿಯ ಪರಶುರಾಮ ನಾಗಪ್ಪ ನರೋಡಿ ಅವರ ಆರು ಹಲ್ಲಿನ ಹೋರಿ (10 ಗ್ರಾಪಂ ಚಿನ್ನದ ಪದಕ).

ಗೋಠೆಯ ಮಹಾಂತೇಶ ಸದಾಶಿವ ಆಲಗೂರ ಅವರ ಎತ್ತಿನ ಜೋಡಿ (₹ 25,000 ನಗದು ಬಹುಮಾನ), ಜುಮನಾಳದ ಸುನೀಲ ಚನ್ನಪ್ಪ ಕೋರಿ ಅವರ ಕಿಲಾರಿ ಆಕಳ ಮಳಕ (₹ 25,000), ಅಥಣಿಯ ರಾಹುಲ ಸಂಜೀವ ಸಿಂಧೆ ಅವರ ಕಿಲಾರಿ ಆಕಳು (7.5ಗ್ರಾಂ ಚಿನ್ನದ ಪದಕ), ತಾಜಪುರದ ಮಲ್ಲುಸಾಬ ಚಿತ್ತರಗಿ ಅವರ ಮಾಸ್ ಕಲರ್ ಕಿಲಾರಿ ಹೋರಿ (₹ 15,000) ಜಾತ್ರಾ ಚಾಂಪಿಯನ್ ಪ್ರಶಸ್ತಿ ಪಡೆದವು.

ಚಾಂಪಿಯನ್: ಹಡಗಲಿಯ ಪುಲಸಿಂಗ್ ನಾರಾಯಣ ರಾಠೋಡ ಅವರ ಹಾಲು ಹಲ್ಲಿನ ಹೋರಿ (₹ 15000), ಜಮಖಂಡಿ ತಾಲ್ಲೂಕಿನ ಆಲಗೂರ ಗ್ರಾಮದ ಬಸಪ್ಪ ಮಲ್ಲಪ್ಪ ಕೊಟ್ರಿ ಅವರ ಎರಡು ಹಲ್ಲಿನ ಹೋರಿ (₹ 10000), ಧೂಳಖೇಡದ ಸುರೇಶ ರಾಯಗೊಂಡ ಪಾಟೀಲರ ನಾಲ್ಕು ಹಲ್ಲಿನ ಹೋರಿ (₹ 10000), ವಿಜಯಪುರದ ಪ್ರಭು ಹಂಚಿನಾಳ ಅವರ ಆರು ಹಲ್ಲಿನ ಹೋರಿ (₹ 7500), ತೊರವಿಯ ಸೊಯತ್ ಸೈಯದ್ ಜಂಡೆ ಅವರ ಮಿಶ್ರ ತಳಿ ಹೋರಿ (₹ 5000) ಚಾಂಪಿಯನ್ ಪಟ್ಟವನ್ನು ತಮ್ಮದಾಗಿಸಿಕೊಂಡವು.

ವಿಜೇತ ರಾಸುಗಳಿಗೆ ನಗರಾಭಿವೃದ್ಧಿ ಖಾತೆ ಸಂಸದೀಯ ಕಾರ್ಯದರ್ಶಿ ಡಾ.ಮಕ್ಬೂಲ್ ಬಾಗವಾನ ಪಾರಿತೋಷಕ ವಿತರಿಸಿದರು. ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಎಲ್‌ಡಿಇ ಸಂಸ್ಥೆ, ಡಿಸಿಸಿ ಬ್ಯಾಂಕ್, ಮಹಾನಗರ ಪಾಲಿಕೆ, ವ್ಯಾಪಾರಸ್ಥರ ಸಂಘ, ಸಿದ್ಧೇಶ್ವರ ಸಂಸ್ಥೆ, ಆಯಿಲ್ ಮಿಲ್ ಅಸೋಸಿಯೇಷನ್, ಕಿರಾಣ ಮರ್ಚೆಂಟ್ಸ್ ಅಸೋಸಿಯೇಷನ್, ಕೃಷಿ ಮಾರಾಟ ಮಂಡಳಿ, ಕೆಎಂಎಫ್‌ ಬಹುಮಾನ ಪ್ರಾಯೋಜಕತ್ವ ವಹಿಸಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry