ಬೋಧ್‌ ಗಯಾದಲ್ಲಿ ಕಚ್ಚಾ ಬಾಂಬ್‌ಗಳು ಪತ್ತೆ

7

ಬೋಧ್‌ ಗಯಾದಲ್ಲಿ ಕಚ್ಚಾ ಬಾಂಬ್‌ಗಳು ಪತ್ತೆ

Published:
Updated:
ಬೋಧ್‌ ಗಯಾದಲ್ಲಿ ಕಚ್ಚಾ ಬಾಂಬ್‌ಗಳು ಪತ್ತೆ

ಪಟ್ನಾ: ಬೌದ್ಧರ ಪವಿತ್ರ ಕ್ಷೇತ್ರ ಬೋಧ್ ಗಯಾದಲ್ಲಿ ಶುಕ್ರವಾರ ರಾತ್ರಿ ಎರಡು ಕಚ್ಚಾ ಬಾಂಬ್‌ಗಳು ಪತ್ತೆಯಾಗಿದೆ.

ಬೋಧ್ ಗಯಾದ ಮಹಾಬೋಧಿ ದೇಗುಲದ 4ನೇ ಗೇಟ್‌ ಬಳಿ ಬಾಂಬ್‌ಗಳು ಪತ್ತೆಯಾಗಿವೆ. ತಲಾ 10 ಕಿಲೋದಷ್ಟಿದ್ದ ಬಾಂಬ್‌ಗಳನ್ನು ನಿಷ್ಕ್ರಿಯಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಸದ್ಯ ಕೇಂದ್ರ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್) ಸಿಬ್ಬಂದಿ ಸ್ಥಳವನ್ನು ಸುತ್ತುವರಿದಿದ್ದು, ಬಿಗಿ ಭದ್ರತೆ ಕಲ್ಪಿಸಲಾಗಿದೆ.

ತಿಂಗಳ ಕಾಲ ನಡೆಯುವ ‘ಕಲ್‌ಚಕ್ರ ಪೂಜಾ’ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು. ಟಿಬೆಟನ್ನರ ಧರ್ಮ ಗುರು ದಲೈ ಲಾಮಾ ಅವರು ಧರ್ಮೋಪದೇಶ ನೀಡಿ ತೆರಳಿದ ನಂತರ ಬಾಂಬ್‌ಗಳು ಪತ್ತೆಯಾಗಿವೆ. ಬಿಹಾರದ ರಾಜ್ಯಪಾಲ ಸತ್ಯಪಾಲ್ ಮಲಿಕ್ ಸಹ ದೇಗುಲದಲ್ಲಿದ್ದರು.

2013ರಲ್ಲಿ ನಡೆದಿತ್ತು ಬಾಂಬ್ ದಾಳಿ: 2013ರಲ್ಲಿ ಮಹಾಬೋಧಿ ದೇಗುಲದ ಆವರಣದಲ್ಲಿ ಸಂಭವಿಸಿದ್ದ ಬಾಂಬ್ ಸ್ಪೋಟದಲ್ಲಿ ಹತ್ತಾರು ಮಂದಿ ಗಾಯಗೊಂಡಿದ್ದರು. 10ಕ್ಕೂ ಹೆಚ್ಚು ಬಾಂಬ್‌ಗಳನ್ನು ದೇಗುಲದ ಆವರಣದಲ್ಲಿ ಹುದುಗಿಸಿಡಲಾಗಿತ್ತು. ಈ ಪೈಕಿ ಮೂರನ್ನು ನಂತರ ನಿಷ್ಕ್ರಿಯಗೊಳಿಸಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry