ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ಮುಂದುವರಿದ ಕಾರ್ಯಾಚರಣೆ

7

ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ಮುಂದುವರಿದ ಕಾರ್ಯಾಚರಣೆ

Published:
Updated:
ಬೆಳ್ಳಂದೂರು ಕೆರೆಯಲ್ಲಿ ಬೆಂಕಿ: ಮುಂದುವರಿದ ಕಾರ್ಯಾಚರಣೆ

ಬೆಂಗಳೂರು: ಬೆಳ್ಳಂದೂರು ಕೆರೆಯಲ್ಲಿ ಹೊತ್ತಿಕೊಂಡಿರುವ ಬೆಂಕಿ ನಂದಿಸುವ ಕೆಲಸ ಶನಿವಾರವೂ ಮುಂದುವರಿದಿದೆ.

ಈಜಿಪುರದ ಶ್ರೀನಿವಾಗಲು ಬಳಿಯ ಕೆರೆ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ ಈಗ ಸ್ವಲ್ಪ ಮಟ್ಟಿಗೆ ನಿಯಂತ್ರಣಕ್ಕೆ ಬಂದಿದೆ. ಆದರೆ, ಹೊಗೆ ನಿಯಂತ್ರಣಕ್ಕೆ ಬರುತ್ತಿಲ್ಲ.

ಶುಕ್ರವಾರ ರಾತ್ರಿಯಿಂದ ಕಾರ್ಯಾಚರಣೆ ನಡೆಯುತ್ತಿದೆ. ದೋಣಿಯಲ್ಲಿ ತೆರಳಿ ಕಾರ್ಯಾಚರಣೆ ಮಾಡಬೇಕಾದ ಸ್ಥಿತಿ ಇದೆ‌. ಬೆಂಕಿ ನಂದಿಸುವ ಕಾರ್ಯಕ್ಕೆ ಕೆರೆಯ ನೀರನ್ನೇ ಅಗ್ನಿಶಾಮಕ ಸಿಬ್ಬಂದಿ ಬಳಸಿಕೊಂಡಿದ್ದಾರೆ. ಅಗ್ನಿಶಾಮಕ ದಳದ 100ಕ್ಕೂ ಹೆಚ್ಚು ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.

ಯೋಧನಿಗೆ ಹಾವು ಕಡಿತ: ಕೆರೆ ಪಕ್ಕವೇ ಸೇನೆಗೆ ಸೇರಿದ ಜಾಗ ಇದ್ದು, ಸೇನಾ ಸಿಬ್ಬಂದಿಯೂ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಈ ವೇಳೆ, ಮನೋರಂಜನ್ ರಾಯ್ ಎಂಬ ಯೋಧನಿಗೆ ಹಾವು ಕಡಿದಿದೆ. ಅವರನ್ನು ಸೇನಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry