ಜೀವ ಜಗತ್ತು:‌ ನಿಮಗೆಷ್ಟು ಗೊತ್ತು?

7

ಜೀವ ಜಗತ್ತು:‌ ನಿಮಗೆಷ್ಟು ಗೊತ್ತು?

Published:
Updated:
ಜೀವ ಜಗತ್ತು:‌ ನಿಮಗೆಷ್ಟು ಗೊತ್ತು?

1. ಪ್ರಣಯ ಕಾಲದಲ್ಲಿ ಹೆಣ್ಣು ಹಕ್ಕಿಯನ್ನು ಒಲಿಸಿಕೊಳ್ಳಲು ಅದಕ್ಕೆಂದೇ ವಿಶೇಷ ವರ್ಣಮಯ ಗರಿಗಳನ್ನು ಪಡೆದು ಪ್ರದರ್ಶಿಸುವ ನಮ್ಮ ರಾಷ್ಟ್ರದ್ದೇ ಸುಪ್ರಸಿದ್ಧ ಹಕ್ಕಿ ನವಿಲು ಚಿತ್ರ-1ರಲ್ಲಿದೆ. ಇದೇ ಉದ್ದೇಶಕ್ಕಾಗಿ, ಇದೇ ರೀತಿ, ಗರಿಗಳ ಅಲಂಕಾರ ಪಡೆದು ಪ್ರದರ್ಶಿಸುವ ಪ್ರಸಿದ್ಧ ಪಕ್ಷಿಗಳು ಈ ಪಟ್ಟಿಯಲ್ಲಿ ಯಾವುವು - ಗುರುತಿಸಬಲ್ಲಿರಾ?

ಅ. ಕೋಗಿಲೆ→ಬ. ಗೋಲ್ಡನ್ ಫೆಸಂಟ್

ಕ. ಕುಂಜ ಪಕ್ಷಿ→ಡ. ಪೆಲಿಕನ್

ಇ. ಲೈರ್ ಬರ್ಡ್→ಈ. ಸಗ್ಗವಕ್ಕಿ

ಉ. ಗೊರವಂಕ

2. ಸಾಗರವಾಸಿ ಮತ್ಸ್ಯಗಳಲ್ಲೆಲ್ಲ ಅತ್ಯಂತ ಪ್ರಸಿದ್ಧವಾದ ‘ಶಾರ್ಕ್’ನ ಒಂದು ವಿಧ ಚಿತ್ರ-2ರಲ್ಲಿದೆ. ಶಾರ್ಕ್‌ಗಳ ಕುರಿತ ಈ ಹೇಳಿಕೆಗಳಲ್ಲಿ ಯಾವುವು ಸರಿಯಲ್ಲ?

ಅ. ಶಾರ್ಕ್‌ಗಳಿಗೆ ಗಟ್ಟಿ ಮೂಳೆಯ ‘ಅಸ್ಥಿ ಪಂಜರ’ ಇಲ್ಲ.

ಬ. ಶಾರ್ಕ್‌ಗಳು ಡೈನೋಸಾರ್‌ಗಳಿಗಿಂತ ಪ್ರಾಚೀನ ಜೀವಿಗಳು.

ಕ. ಶಾರ್ಕ್‌ಗಳಲ್ಲಿ ಸುಮಾರು ಐದುನೂರು ಪ್ರಭೇದಗಳಿವೆ.

ಡ. ಶಾರ್ಕ್‌ಗಳ ಎಲ್ಲ ಪ್ರಭೇದಗಳದೂ ಬೃಹದ್ಗಾತ್ರ.

ಇ. ಶಾರ್ಕ್‌ಗಳ ದಂತ ಪಂಕ್ತಿಗಳು ಆಗಾಗ ಉದುರಿಹೋಗುತ್ತವೆ.

ಈ. ಶಾರ್ಕ್‌ಗಳು ನರಭಕ್ಷಕ ಪ್ರಾಣಿಗಳು.

ಉ. ಮನುಷ್ಯರ ಮಿತಿಮೀರಿದ ಬೇಟೆಯಿಂದಾಗಿ ಶಾರ್ಕ್‌ಗಳು ಅಳಿವ ಹಾದಿಯಲ್ಲಿವೆ.

3. ಕಡಲಿನಲ್ಲಿದ್ದು ಮೃತವಾದ ಅಗ್ನಿಪರ್ವತದ ಬಾಯನ್ನು ಆವರಿಸುವಂತೆ ಕಡಲಿನದೇ ಒಂದು ಬಗೆಯ ಜೀವಿಗಳು ಲಕ್ಷಾಂತರ ಸಂಖ್ಯೆಯಲ್ಲಿ ಒಟ್ಟುಗೂಡಿ, ಲಕ್ಷಾಂತರ ವರ್ಷಗಳಲ್ಲಿ ನಿರ್ಮಿಸುವ ‘ಕಟ್ಟಡ’ದಿಂದ ಮೈದಳೆದಿರುವ ವಿಶಿಷ್ಟ ವಿಧದ ‘ದ್ವೀಪ’ ಚಿತ್ರ-3ರಲ್ಲಿದೆ:

ಅ. ಇಂಥ ದ್ವೀಪಗಳಿಗೆ ಏನು ಹೆಸರು?

ಬ. ಈ ಬಗೆಯ ದ್ವೀಪಗಳನ್ನು ನಿರ್ಮಿಸುವ ಜೀವಿ ಯಾವುದು?

4. ಚಿತ್ರ-4ರಲ್ಲಿರುವ ಅತ್ಯಂತ ವಿಚಿತ್ರವಾದ, ಆದರೆ ಅತ್ಯಂತ ಪರಿಚಿತವಾದ ಜೀವಿಯನ್ನು ಗಮನಿಸಿ. ಈ ಪ್ರಾಣಿ ಯಾವುದೆಂದು ಗುರುತಿಸಬಲ್ಲಿರಾ?

ಅ. ಸೈನಿಕ ಇರುವೆ→ಬ. ಕಣಜ

ಕ. ದುಂಬಿ →ಡ. ಜೇಡ

5. ಹೇರಳ ವೈವಿಧ್ಯ ಇರುವ ಖಗ ವರ್ಗದಲ್ಲಿ ಅತ್ಯದ್ಭುತ ಸ್ವರೂಪದ ಕೊಕ್ಕನ್ನು ಪಡೆದಿರುವ ಹಕ್ಕಿಯ ವಿಧವೊಂದು ಚಿತ್ರ-5ರಲ್ಲಿದೆ:

ಅ. ಪಕ್ಷಿ ವರ್ಗದಲ್ಲಿ ಒಟ್ಟು ಸುಮಾರು ಎಷ್ಟು ಪ್ರಭೇದಗಳಿವೆ?

ಬ. ಚಿತ್ರದಲ್ಲಿರುವ ಹಕ್ಕಿ ಇವುಗಳಲ್ಲಿ ಯಾವುದು- ‘ಟೌಕಾನ್, ಹಾರ್ನ್ ಬಿಲ್, ರಣಹದ್ದು, ಮರಕುಟುಕ’?

6. ಮತ್ಸ್ಯವರ್ಗದಲ್ಲೇ ಅತ್ಯಂತ ವಿಭಿನ್ನ, ವಿಶಿಷ್ಟ ಸಾಮರ್ಥ್ಯ ಪಡೆದು ವಿಖ್ಯಾತವಾಗಿರುವ ಪ್ರಭೇದದ ಮತ್ಸ್ಯವೊಂದು ಚಿತ್ರ-6ರಲ್ಲಿದೆ:

ಅ. ಈ ಮೀನಿನ ಹೆಸರೇನು?

ಬ. ಈ ಮೀನಿನ ಅತಿ ವಿಶಿಷ್ಟ ಸಾಮರ್ಥ್ಯ ಏನು?

7. ವಾರ್ಷಿಕ ವಲಸೆ ಪಯಣದ ಹಾದಿಯಲ್ಲಿರುವ ವಿಶ್ವ ಪ್ರಸಿದ್ಧ ಕವಲು ಕೊಂಬಿನ ಪ್ರಾಣಿ ಹಿಂಡೊಂದು ಚಿತ್ರ-7ರಲ್ಲಿದೆ. ಈ ಪ್ರಾಣಿ ಯಾವುದು ಗೊತ್ತೇ?

ಅ. ಕಸ್ತೂರಿ ಮೃಗ →ಬ. ಮೂಸ್

ಕ. ಎಲ್ಕ್ →ಡ. ಚುಕ್ಕಿ ಜಿಂಕೆ

ಇ. ಕ್ಯಾರಿಬೂ

8. ವರ್ಷವಿಡೀ ಲಭಿಸುವ ಧಾರಾಳ ಸೂರ್ಯ ರಶ್ಮಿ ಮತ್ತು ನಿತ್ಯ ವೃಷ್ಟಿಯಲ್ಲಿ ನಿಬಿಡವಾಗಿ ಬೆಳೆದಿರುವ ‘ವೃಷ್ಟಿವನ’ದ ದೃಶ್ಯವೊಂದು ಚಿತ್ರ-8ರಲ್ಲಿದೆ. ಧರೆಯಲ್ಲಿ ವೃಷ್ಟಿವನ ಪ್ರದೇಶ ಯಾವ ಭೂಖಂಡದಲ್ಲಿ ಗರಿಷ್ಠ?

ಅ. ಆಫ್ರಿಕಾ →ಬ. ದಕ್ಷಿಣ ಅಮೆರಿಕ

ಕ. ಏಷ್ಯಾ →ಡ. ಆಸ್ಟ್ರೇಲಿಯ

9. ವರ್ಣಾಲಂಕೃತವಾದ, ಸುಂದರ ರೂಪದ, ಮೃದ್ವಂಗಿ ಚಿಪ್ಪೊಂದು ಚಿತ್ರ-9ರಲ್ಲಿದೆ. ಮೃದ್ವಂಗಿಗಳ ಐದು ಪ್ರಧಾನ ವಿಧಗಳನ್ನು ಈ ಕೆಳಗೆ ಹೆಸರಿಸಲಾಗಿದೆ. ಚಿತ್ರದಲ್ಲಿರುವ ಚಿಪ್ಪು ಯಾವ ವರ್ಗದ ಮೃದ್ವಂಗಿ ನಿರ್ಮಿತ?

ಅ. ಸೆಫಲೋಪೋಡಾ →ಬ. ಗ್ಯಾಸ್ಟ್ರೋಪೋಡಾ

ಕ. ಬೈವಾಲ್ವಿಯಾ →ಡ. ಸ್ಕೇಫೋಪೋಡಾ

ಇ. ಪಾಲಿಪ್ಲಕೋಫೋರಾ

10. ಶರತ್ಕಾಲದಲ್ಲಿ ಹಲವಾರು ಪ್ರದೇಶಗಳ ಹೇರಳ ಬಗೆಯ ವೃಕ್ಷಗಳು ಹಸಿರಲ್ಲದ ವರ್ಣಗಳ ಪರ್ಣದುಡುಗೆಯನ್ನು ಧರಿಸಿ ನಿಲ್ಲುತ್ತವೆ - ಅಂಥದೊಂದು ದೃಶ್ಯ ಚಿತ್ರ-10ರಲ್ಲಿದೆ. ಎಲೆಗಳ ಹಸಿರು ಬಣ್ಣಕ್ಕೆ ‘ಕ್ಲೋರೋಫಿಲ್’ ಕಾರಣವಾಗಿರುವಂತೆ ಈ ಕೆಳಗಿನ ವರ್ಣಗಳಿಗೆ ಯಾವ ಯಾವ ವರ್ಣ ದ್ರವ್ಯಗಳು ಕಾರಣ?

ಅ. ಕೆಂಪು ಬ. ಹಳದಿ ಕ. ಕಿತ್ತಳೆ ಡ. ನೇರಳೆ

11. ಧೃಡವಾದ ಚಿಪ್ಪಿನ, ಸುಪ್ರಸಿದ್ಧ ಪ್ರಾಣಿ ಆಮೆ ಚಿತ್ರ-11ರಲ್ಲಿದೆ. ಆಮೆಗಳು ಯಾವ ಜೀವಿ ವರ್ಗಕ್ಕೆ ಸೇರಿವೆ?

ಅ. ಮೃದ್ವಂಗಿ (ಮೊಲಸ್ಕ್)

ಬ. ಉಭಯವಾಸಿ (ಆ್ಯಂಫಿಬಿಯನ್)

ಕ. ಚಿಪ್ಪಿನ ಜೀವಿ (ಕ್ರಸ್ಟೇಶಿಯನ್)

ಡ. ಸರೀಸೃಪ (ರೆಪ್ಟೈಲ್)

12. ವಿಸ್ಮಯ ಸ್ವರೂಪದ, ಹಾಗಾಗಿಯೇ ವಿಖ್ಯಾತವಾದ ಮರುಭೂಮಿ ಸಸ್ಯವೊಂದು ಚಿತ್ರ-12ರಲ್ಲಿದೆ. ಈ ಸಸ್ಯ ಯಾವುದೆಂದು ಗುರುತಿಸಬಲ್ಲಿರಾ?

ಅ. ಸೆಗ್ವಾರೋ ಕಳ್ಳಿ →ಬ. ತಾಳೆ ಗಿಡ

ಕ. ಭೂಜಮ್ ವೃಕ್ಷ

ಡ. ಬಾವೋಬಾಬ್ ಮರ

13. ಜಗತ್ತಿನೆಲ್ಲೆಡೆ ಅತ್ಯಂತ ಪರಿಚಿತವಾಗಿರುವ ‘ದೈತ್ಯ ಪಾಂಡಾ’ ಚಿತ್ರ-13ರಲ್ಲಿದೆ. ಪಾಂಡಾಗಳ ಏಕೈಕ ಆಹಾರ ಇವುಗಳಲ್ಲಿ ಯಾವುದು?

ಅ. ಕಬ್ಬಿನ ಎಳೇ ಗಿಡಗಳು

ಬ. ಬಗೆ ಬಗೆಯ ಹಣ್ಣುಗಳು

ಕ. ಹಸಿರು ಗರಿಕೆ ಹುಲ್ಲು

ಡ. ಎಳೇ ಬಿದಿರು ಸಸ್ಯ

14. ಬಳ್ಳಿಯಾಗಿ ಹಬ್ಬಿ, ನೆಲದಲ್ಲೋ, ಚಪ್ಪರದ ಮೇಲೋ ಹರಡಿ ಬೆಳೆವ ಸಸ್ಯವೊಂದು ಚಿತ್ರ-14ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿರುವ ಯಾವ ಯಾವ ‘ತರಕಾರಿ ಗಿಡ’ಗಳು ಹೀಗೆ ಬಳ್ಳಿ ಗಿಡಗಳಾಗಿವೆ?

ಅ. ಹಾಗಲ ಕಾಯಿ →ಬ. ಬದನೆ ಕಾಯಿಕ.

ಅವರೆ ಕಾಯಿ →ಡ. ಪಡುವಲ ಕಾಯಿ

ಇ. ಬೆಂಡೆ ಕಾಯಿ →ಈ. ತೊಂಡೆ ಕಾಯಿ

ಉ. ಕುಂಬಳ ಕಾಯಿ →ಟ. ಹೀರೆ ಕಾಯಿ

ಣ. ಗೋರಿ ಕಾಯಿ

ಉತ್ತರಗಳು :

1. ಬ, ಇ ಮತ್ತು ಈ

2. ತಪ್ಪು ಹೇಳಿಕೆಗಳು: ಡ ಮತ್ತು ಈ

3. ಅ. ಎಟಾಲ್; ಬ. ಹವಳದ ಜೀವಿ

4. ಡ. ಜೇಡ (ಎಂಟು ಕಾಲುಗಳನ್ನುಗಮನಿಸಿ)

5. ಅ. ಹತ್ತು ಸಾವಿರ ಪ್ರಭೇದಗಳು; ಬ. ಹಾರ್ನ್ ಬಿಲ್

6. ಅ. ಮಡ್ ಸ್ಕಿಪ್ಪರ್; ಬ. ಉಭಯವಾಸಿಗಳಂತೆ ನೀರಲ್ಲೂ, ನೆಲದಲ್ಲೂ ಬದುಕಬಲ್ಲ ಸಾಮರ್ಥ್ಯ

7. ಇ. ಕ್ಯಾರಿಬೂ

8. ಬ. ದಕ್ಷಿಣ ಅಮೆರಿಕ

9. ಬ. ಗ್ಯಾಸ್ಟ್ರೋಪೋಡಾ

10.ಹಳದಿ ಮತ್ತು ಕಿತ್ತಳೆ - ಕೆರೋಟಿನಾಯಿಡ್; ಕೆಂಪು ಮತ್ತು ನೇರಳೆ - ಆಂಥೋಸಯಾನಿನ್

11. ಡ. ಸರೀಸೃಪ

12. ಕ. ಭೂಜಮ್ ಮರ

13. ಡ. ಎಳೇ ಬಿದಿರು ಸಸ್ಯ

14. ಅ, ಡ, ಈ, ಉ ಮತ್ತು ಟ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry