ಯಂಗ್ ಇಂಡಿಯಾದಿಂದ ₹ 414 ಕೋಟಿ ತೆರಿಗೆ ಬಾಕಿ

7

ಯಂಗ್ ಇಂಡಿಯಾದಿಂದ ₹ 414 ಕೋಟಿ ತೆರಿಗೆ ಬಾಕಿ

Published:
Updated:
ಯಂಗ್ ಇಂಡಿಯಾದಿಂದ ₹ 414 ಕೋಟಿ ತೆರಿಗೆ ಬಾಕಿ

ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಯಂಗ್ ಇಂಡಿಯಾ ಕಂಪನಿ ಪಾವತಿಸಬೇಕಿರುವ ₹ 414 ಕೋಟಿ ತೆರಿಗೆ ಸಂಬಂಧ ತೆರಿಗೆ ಇಲಾಖೆ ಹೊರಡಿಸಿದ ಆದೇಶದ ಪ್ರತಿಯನ್ನು ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ದೆಹಲಿ ಕೋರ್ಟ್‌ಗೆ ಶನಿವಾರ ಸಲ್ಲಿಸಿದ್ದಾರೆ.

ಯಂಗ್ ಇಂಡಿಯಾ ಕಂಪನಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿಯನ್ನು ರದ್ದುಪಡಿಸಿದ ಆದೇಶ ಇದಾಗಿದ್ದು, ಕಂಪನಿ ಸಲ್ಲಿಸಬೇಕಿರುವ ತೆರಿಗೆಯ ವಿವರಗಳೂ ಈ ಆದೇಶದಲ್ಲಿದೆ. ಯಂಗ್ ಇಂಡಿಯಾದ ಬಹುಪಾಲು ಷೇರುಗಳನ್ನು ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಹೊಂದಿದ್ದಾರೆ.

ಪ್ರಕರಣದ ಮುಂದಿನ ವಿಚಾರಣೆವರೆಗೆ ಈ ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ ಇರಿಸಬೇಕು ಎಂದು ನ್ಯಾಯಾಧೀಶರು ಆದೇಶಿಸಿದ್ದಾರೆ. ಮುಂದಿನ ವಿಚಾರಣೆಯನ್ನು ಮಾರ್ಚ್ 27ಕ್ಕೆ ನಿಗದಿ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry