ಸಾರ್ವಜನಿಕ ನೀತಿ ಕೇಂದ್ರ ಉದ್ಘಾಟನೆ

7

ಸಾರ್ವಜನಿಕ ನೀತಿ ಕೇಂದ್ರ ಉದ್ಘಾಟನೆ

Published:
Updated:

ಬೆಂಗಳೂರು: ಶಿಕ್ಷಣ, ಆರೋಗ್ಯ, ವ್ಯಾಪಾರ ಮತ್ತು ವಾಣಿಜ್ಯ ತಂತ್ರಜ್ಞಾನ ಹಾಗೂ ಕಾನೂನು ವಿಷಯಗಳಲ್ಲಿ ಅಧ್ಯಯನ, ಸಂಶೋಧನೆ ನಡೆಸುವ ಹಾಗೂ ಅಗತ್ಯ ಶಿಫಾರಸುಗಳನ್ನು ಮಾಡುವ ಸಲುವಾಗಿ ರಾಮಯ್ಯ ವಿಶ್ವವಿದ್ಯಾಲಯದ ಪ್ರಾಂಗಣದಲ್ಲಿ ‘ರಾಮಯ್ಯ ಸಾರ್ವಜನಿಕ ನೀತಿ ಕೇಂದ್ರ’ವನ್ನು ಆರಂಭಿಸಲಾಗಿದೆ.

ಈ ಕೇಂದ್ರವನ್ನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಚಲಮೇಶ್ವರ್‌ ಶನಿವಾರ ಉದ್ಘಾಟಿಸಿದರು.

ಇಂದು ತಂತ್ರಜ್ಞಾನ ಕ್ಷಿಪ್ರಗತಿಯಲ್ಲಿ ಬದಲಾವಣೆಯಾಗುತ್ತಿದೆ. ಸಮಾಜವೂ ಅಷ್ಟೇ ವೇಗದಲ್ಲಿ ಬದಲಾಗುತ್ತಿದೆ. ಇದಕ್ಕೆ ತಕ್ಕಂತೆ ಆಡಳಿತ ಮತ್ತು ಜನಜೀವನ ಸುಧಾರಣೆಗಾಗಿ ಉತ್ತಮ ಶಿಫಾರಸುಗಳನ್ನು ನೀಡುವುದು ಈ ಕೇಂದ್ರದ ಉದ್ದೇಶ ಎಂದು ಕೇಂದ್ರದ ಸಲಹಾ ಮಂಡಳಿ ಮುಖ್ಯಸ್ಥ ಡಾ.ಅನಿಲ್‌ ಕಾಕೋಡ್ಕರ್‌ ತಿಳಿಸಿದರು.

12 ವಿಷಯಗಳ ಸಂಶೋಧನೆ: ‘ಕೇಂದ್ರವು 12 ವಿಷಯಗಳ ಮೇಲೆ ಸಂಶೋಧನೆ ನಡೆಸಲಿದೆ. ರಾಷ್ಟ್ರೀಯ ಉನ್ನತ ಶಿಕ್ಷಣ ನೀತಿ, ರಾಷ್ಟ್ರೀಯ ಆರೋಗ್ಯ ನೀತಿ ಮತ್ತು ಕಾರ್ಯಕ್ರಮ, ನಿಖರ ಆರೋಗ್ಯ ಮಾಹಿತಿ, ನದಿ ನೀರು ಹಂಚಿಕೆ ಮಾರ್ಗಗಳು, ಸ್ಥಳೀಯ ಹವಾಮಾನ ಮಾಹಿತಿ, ವಿಶ್ವವಿದ್ಯಾಲಯ ಆಡಳಿತ, ಭಾರತೀಯ ಪಾರಂಪಾರಿಕ ಮತ್ತು ಪ್ರಾಚೀನತೆ ಕಾನೂನು, ಸಾಂಸ್ಕೃತಿಕ ಮಾಹಿತಿ, ಸ್ಟೇಟ್‌ಲೆಸ್‌ನೆಸ್‌– ಒಂದು ಉನ್ನತ ಕಾನೂನು ಮಾದರಿ, ಸಂಯೋಜಿತ ವ್ಯವಸಾಯ ಮತ್ತು ನಿರ್ವಹಣೆ, ಇ–ಆಡಳಿತ: ಭೂಮಿ ಯೋಜನೆಯ ಸೈದ್ಧಾಂತಿಕ ಮೌಲ್ಯಮಾಪನ, ಸ್ಮಾರ್ಟ್‌ ಸಿಟಿಗಳು ಮತ್ತು ಅದರ ಆಡಳಿತ ಸಂಶೋಧನೆಯಲ್ಲಿ ಒಳಗೊಂಡಿರುವ ಪ್ರಮುಖ ವಿಷಯಗಳು’ ಎಂದು ಕೇಂದ್ರದ ಉಪನಿರ್ದೇಶಕ ಚೇತನ್‌ ಸಿಂಗೈ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry