24ಕ್ಕೆ ಕುಸ್ತಿ ಆಯ್ಕೆ ಟ್ರಯಲ್ಸ್‌

6

24ಕ್ಕೆ ಕುಸ್ತಿ ಆಯ್ಕೆ ಟ್ರಯಲ್ಸ್‌

Published:
Updated:

ಬೆಂಗಳೂರು: ಕರ್ನಾಟಕ ಕುಸ್ತಿ ಸಂಸ್ಥೆ ಬಾಲಕರ ಫ್ರೀಸ್ಟೈಲ್‌, ಗ್ರೀಕೊ ರೋಮನ್‌ ಮತ್ತು ಮಹಿಳೆಯರ ಜೂನಿಯರ್‌ ವಿಭಾಗಗಳಲ್ಲಿ ಜನವರಿ 24ರಂದು ಆಯ್ಕೆ ಟ್ರಯಲ್ಸ್‌ ನಡೆಸಲಿದೆ.

ಫೆಬ್ರುವರಿ 22ರಿಂದ 25 ರವರೆಗೆ ರಾಜಸ್ಥಾನದ ಜೈಪುರದಲ್ಲಿ 37ನೇ ರಾಷ್ಟ್ರೀಯ ಬಾಲಕರ ಫ್ರೀಸ್ಟೈಲ್‌, ಗ್ರೀಕೊ ರೋಮನ್‌ ಮತ್ತು 20ನೇ ರಾಷ್ಟ್ರೀಯ ಮಹಿಳಾ ಜೂನಿಯರ್‌ ಕುಸ್ತಿ ಚಾಂಪಿಯನ್‌ಷಿಪ್‌ ನಡೆಯಲಿದೆ. ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಬೆಳಿಗ್ಗೆ 10.30ಕ್ಕೆ ಟ್ರಯಲ್ಸ್‌ ಹಮ್ಮಿಕೊಳ್ಳಲಾಗಿದೆ. ಟ್ರಯಲ್ಸ್‌ ನಡೆಯುವ ವಿಭಾಗಗಳು: ಫ್ರೀಸ್ಟೈಲ್‌: 57, 61, 65, 70, 74, 79, 86, 92, 97 ಮತ್ತು 125 ಕೆ.ಜಿ. ಗ್ರಿಕೊ ರೋಮನ್‌: 55, 60, 63, 67, 72, 77, 82, 87, 97 ಮತ್ತು 130 ಕೆ.ಜಿ. ಮಹಿಳೆಯರ ವಿಭಾಗ: 50, 53, 55, 57, 59, 62, 65, 68, 72 ಮತ್ತು 76 ಕೆ.ಜಿ. ಹೆಚ್ಚಿನ ಮಾಹಿತಿಗೆನರಸಿಂಹ (ಮೊ: 9844123303) ಸಂಪರ್ಕಿಸಬಹುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry