ಡಾರ್ವಿನ್ ಸಿದ್ಧಾಂತ ತಪ್ಪು ಎಂಬ ವಾದಕ್ಕೆ ವಿವರಣೆ ಕೊಡಿ ಎಂದ ವಿಜ್ಞಾನಿಗಳ ಪತ್ರಕ್ಕೆ ಉತ್ತರಿಸದೆ ನುಣುಚಿಕೊಂಡ ಸಚಿವ ಸತ್ಯಪಾಲ್ ಸಿಂಗ್!

7

ಡಾರ್ವಿನ್ ಸಿದ್ಧಾಂತ ತಪ್ಪು ಎಂಬ ವಾದಕ್ಕೆ ವಿವರಣೆ ಕೊಡಿ ಎಂದ ವಿಜ್ಞಾನಿಗಳ ಪತ್ರಕ್ಕೆ ಉತ್ತರಿಸದೆ ನುಣುಚಿಕೊಂಡ ಸಚಿವ ಸತ್ಯಪಾಲ್ ಸಿಂಗ್!

Published:
Updated:
ಡಾರ್ವಿನ್ ಸಿದ್ಧಾಂತ ತಪ್ಪು ಎಂಬ ವಾದಕ್ಕೆ ವಿವರಣೆ ಕೊಡಿ ಎಂದ ವಿಜ್ಞಾನಿಗಳ ಪತ್ರಕ್ಕೆ ಉತ್ತರಿಸದೆ ನುಣುಚಿಕೊಂಡ ಸಚಿವ ಸತ್ಯಪಾಲ್ ಸಿಂಗ್!

ಔರಂಗಾಬಾದ್: ಚಾರ್ಲ್ಸ್ ಡಾರ್ವಿನ್‌ ಅವರ 'ಮಾನವ ವಿಕಾಸ' ಸಿದ್ಧಾಂತ ವೈಜ್ಞಾನಿಕವಾಗಿ ಸರಿ ಇಲ್ಲ. ಆದ್ದರಿಂದ ಶಾಲೆ ಹಾಗೂ ಕಾಲೇಜುಗಳ ಪಠ್ಯಕ್ರಮದಲ್ಲಿ ಅದನ್ನು ಬದಲಾಯಿಸುವ ಅಗತ್ಯವಿದೆ. ಮಾನವ ಭೂಮಿ ಮೇಲೆ ಕಾಣಿಸಿಕೊಂಡಂದಿನಿಂದ ಮಾನವನಾಗಿಯೇ ಇದ್ದಾನೆ ಎನ್ನುವ ಮೂಲಕ ಡಾರ್ವಿನ್ ಸಿದ್ಧಾಂತ ತಪ್ಪು ಎಂದು ವಾದಿಸಿದ್ದ ಕೇಂದ್ರ ಸಚಿವ ಸತ್ಯಪಾಲ್ ಸಿಂಗ್ ಅವರಿಗೆ ವಿಜ್ಞಾನಿಗಳು ಪತ್ರ ಬರೆದಿದ್ದಾರೆ.

ಶುಕ್ರವಾರ ಔರಂಗಾಬಾದ್‌ನಲ್ಲಿ ವರದಿಗಾರರೊಂದಿಗೆ ಮಾತನಾಡಿದ ಕೇಂದ್ರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಹಾಯಕ ಸಚಿವ ಸಿಂಗ್‌, ಮಂಗ ಮಾನವನಾಗಿ ಪರಿವರ್ತನೆಗೊಂಡಿದ್ದನ್ನು ನೋಡಿದ್ದೇವೆ ಎಂದು ನಮ್ಮ ಪೂರ್ವಿಕರು ಲಿಖಿತ ಅಥವಾ ಮೌಖಿಕವಾಗಿ ಎಲ್ಲಿಯೂ ಹೇಳಿಕೊಂಡಿಲ್ಲ. ನಾವು ಓದಿದ ಪುಸ್ತಕದಲ್ಲಿ ಅಥವಾ ನಮ್ಮ ಹಿರಿಯರು ನಮಗೆ ಹೇಳಿದ ಕಥೆಗಳಲ್ಲಿ ಈ ಬಗ್ಗೆ ಉಲ್ಲೇಖವಿಲ್ಲ ಎಂದು ವಾದಿಸಿದ್ದರು.

ಸಿಂಗ್ ಅವರ ವಾದವನ್ನು ಖಂಡಿಸಿದ ವಿಜ್ಞಾನಿಗಳು, ಮಾನವ ವಿಕಾಸ ಸಿದ್ಧಾಂತವನ್ನು ನಿರಾಕರಿಸಲು ಸಾಧ್ಯವೇ ಇಲ್ಲ. ಪ್ರತಿಯೊಂದು ಹೊಸ ಸಂಶೋಧನೆಯೂ ಡಾರ್ವಿನ್‍ ಸಿದ್ಧಾಂತಕ್ಕೆ ಪುಷ್ಠಿ ನೀಡುತ್ತಲೇ ಬಂದಿದೆ. ನಿಮ್ಮ  ಈ ಹೇಳಿಕೆಯಿಂದ ನಮಗೆ ನೋವಾಗಿದೆ ಎಂದು 388 ವಿಜ್ಞಾನಿಗಳ ಸಹಿ ಹಾಕಿರುವ ಪತ್ರವೊಂದನ್ನು ಸಚಿವರಿಗೆ  ಕಳುಹಿಸಿರುವುದಾಗಿ journosdiary.com ವೆಬ್‌‍ಸೈಟ್ ವರದಿ ಮಾಡಿದೆ.

ಸಚಿವ ಸಿಂಗ್ ಅವರ ಹೇಳಿಕೆ ದಾರಿ ತಪ್ಪಿಸುತ್ತಿದೆ. ಮಂಗನಿಂದ ಮಾನವ ಎಂಬದಕ್ಕೆ ಸಾಕಷ್ಟು ವೈಜ್ಞಾನಿಕ ಸಾಕ್ಷ್ಯಗಳು ಇವೆ. ವೇದಗಳು ಎಲ್ಲದಕ್ಕೂ ಉತ್ತರ ನೀಡುತ್ತದೆ ಎಂದು ಸಚಿವರು ಹೇಳುತ್ತಿದ್ದಾರೆ. ಈ ರೀತಿ ಹೇಳುವ ಮೂಲಕ ಸಚಿವರು ಭಾರತದ ವೈಜ್ಞಾನಿಕ ಇತಿಹಾಸದ ಬಗ್ಗೆ ನಡೆದ ಸಂಶೋಧನಾ ಕಾರ್ಯಗಳನ್ನು ಅವಮಾನಿಸಿದ್ದಾರೆ.

ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಚಿವರೇ ಈ ರೀತಿ ವಾದಿಸಿದರೆ ದೇಶದಲ್ಲಿನ ವೈಜ್ಞಾನಿಕ ಚಿಂತನೆ ಮತ್ತು ಆಧುನಿಕ ವೈಜ್ಞಾನಿಕ ಸಂಶೋಧನೆಗಳಲ್ಲಿ ತೊಡಗಿರುವ ವಿಜ್ಞಾನಿಗಳ ಸಮುದಾಯದ ಶ್ರಮವನ್ನು ಕಡೆಗಣಿಸಿದಂತಾಗುತ್ತದೆ. ಅವರ ಈ ಹೇಳಿಕೆ ಜಾಗತಿಕ ಮಟ್ಟದಲ್ಲಿ ಭಾರತದ ಸಂಶೋಧಕರ ಘನತೆಯನ್ನು ಕುಗ್ಗಿಸಿದಂತಾಗುತ್ತದೆ ಎಂದು ಪತ್ರದಲ್ಲಿ ಹೇಳಲಾಗಿದೆ.

ಆದಾಗ್ಯೂ, ವಿಜ್ಞಾನಿಗಳ ಪತ್ರಕ್ಕೆ ಸ್ಪಂದಿಸದ ಸಚಿವರು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಡಾರ್ವಿನ್ ಸಿದ್ಧಾಂತ ಬಗ್ಗೆ ಜಗತ್ತೇ ಸವಾಲೆಸೆದಿದೆ. ಡಾರ್ವಿನ್ ಸಿದ್ಧಾಂತ ಕಾಲ್ಪನಿಕ ಕತೆ. ನಾನು ಯಾವುದೇ ಆಧಾರ ಇಲ್ಲದೆ ಹೇಳಿಕೆ ನೀಡುವುದಿಲ್ಲ. ನಾನು ಕೂಡಾ ವಿಜ್ಞಾನ ಓದಿದ್ದೇನೆ. ನಾನು ಕಲಾ ವಿಭಾಗ ಹಿನ್ನೆಲೆಯಿಂದ ಬಂದವನಲ್ಲ. ದೆಹಲಿ ವಿಶ್ವವಿದ್ಯಾಲಯದಿಂದ ರಸಾಯನ ಶಾಸ್ತ್ರದಲ್ಲಿ ಪಿಹೆಚ್‍ಡಿ ಮಾಡಿದ್ದೇನೆ ಎಂದು ಹೇಳಿರುವುದಾಗಿ ಎನ್‍ಡಿಟಿವಿ ವರದಿ ಮಾಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry