ಪ್ರಜಾವಾಣಿ ಕ್ಚಿಜ್ ಚಾಂಪಿಯನ್‌ಶಿಪ್‌: ಫೈನಲ್ಸ್‌ಗೆ ಪ್ರವೇಶ ಪಡೆದ ತುಮಕೂರಿನ ವಿದ್ಯಾನಿಕೇತನ ಶಾಲೆ

7

ಪ್ರಜಾವಾಣಿ ಕ್ಚಿಜ್ ಚಾಂಪಿಯನ್‌ಶಿಪ್‌: ಫೈನಲ್ಸ್‌ಗೆ ಪ್ರವೇಶ ಪಡೆದ ತುಮಕೂರಿನ ವಿದ್ಯಾನಿಕೇತನ ಶಾಲೆ

Published:
Updated:
ಪ್ರಜಾವಾಣಿ ಕ್ಚಿಜ್ ಚಾಂಪಿಯನ್‌ಶಿಪ್‌: ಫೈನಲ್ಸ್‌ಗೆ ಪ್ರವೇಶ ಪಡೆದ ತುಮಕೂರಿನ ವಿದ್ಯಾನಿಕೇತನ ಶಾಲೆ

ತುಮಕೂರು: ನಗರದ ಸಿದ್ದಗಂಗಾ ತಾಂತ್ರಿಕ ಕಾಲೇಜಿನ ಬಿರ್ಲಾ ಸಭಾಂಗಣದಲ್ಲಿ ಸೋಮವಾರ ನಡೆದ ಪ್ರಜಾವಾಣಿ ಕ್ವಿಜ್ ಚಾಂಪಿಯನ್‌ಶಿಪ್‌ ಸ್ಪರ್ಧೆಯಲ್ಲಿ ತುಮಕೂರಿನ ವಿದ್ಯಾನಿಕೇತನ ಶಾಲೆ-2 ನೇ ತಂಡದ ಅಚ್ಯುತ್ ಶರ್ಮಾ ಹಾಗೂ ಎಂ.ವಿ.ಶ್ರೆಯಸ್ ಅವರು 80 ಅಂಕಗಳನ್ನು ಪಡೆಯುವ ಮೂಲಕ ಬೆಂಗಳೂರಿನಲ್ಲಿ ಜ.24 ರಂದು ನಡೆಯುವ ಅಂತಿಮ ಹಂತದ ಸ್ಪರ್ಧೆಗೆ ಪ್ರವೇಶ ಪಡೆದರು.

ತಿಪಟೂರಿನ ಕಲ್ಪತರು ಸೆಂಟ್ರಲ್ ಸ್ಕೂಲ್ ನ ಪಿ.ಯುಕ್ತಿ ಸಾಹಿತ್ಯ ಮತ್ತು ಬಿ.ಎಂ.ರಚನಾ ಅವರ ತಂಡ 40 ಅಂಕಗಳನ್ನು ಗಳಿಸಿ ದ್ವಿತೀಯ ಸ್ಥಾನ ಪಡೆಯಿತು.

ಮಧುಗಿರಿಯ ಜುಪಿಟರ್ ಪಬ್ಲಿಕ್ ಸ್ಕೂಲ್ ನ ಎಂ.ಚೇತನ್ ಮತ್ತು ವಿಶಾಲ್ ಪಟೇಲ್ ಅವರ ತಂಡ 35 ಅಂಕ ಗಳಿಸಿ ತೃತೀಯ ಸ್ಥಾನ ಪಡೆಯಿತು.

ವಿಜೇತ ತಂಡಗಳಿಗೆ ಬಹುಮಾನ ಹಾಗೂ ಅಂತಿಮ ಸುತ್ತಿನಲ್ಲಿ ಭಾಗವಹಿಸಿದ ತಂಡಗಳಿಗೆ ಪ್ರಮಾಣಪತ್ರಗಳನ್ನು ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಜಯಶೀಲ, ತುಮಕೂರು ನಗರ ಡಿವೈಎಸ್ಪಿ ನಾಗರಾಜ್ ಅವರು ವಿತರಿಸಿದರು.

ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಶಾಲೆಗಳಿಂದ 850ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry