ಕಬಡ್ಡಿ: ಆಳ್ವಾಸ್ ತಂಡಕ್ಕೆ ಪ್ರಶಸ್ತಿ

7

ಕಬಡ್ಡಿ: ಆಳ್ವಾಸ್ ತಂಡಕ್ಕೆ ಪ್ರಶಸ್ತಿ

Published:
Updated:
ಕಬಡ್ಡಿ: ಆಳ್ವಾಸ್ ತಂಡಕ್ಕೆ ಪ್ರಶಸ್ತಿ

ಭಟ್ಕಳ: ಮೂಡಬಿದಿರೆಯ ಆಳ್ವಾಸ್ ತಂಡ ಇಲ್ಲಿನ ಗುರುಸುಧೀಂದ್ರ ಕಾಲೇಜು ಮೈದಾನದಲ್ಲಿ ಕಟ್ಟೆವೀರ ಸ್ಪೋರ್ಟ್ಸ್ ಕ್ಲಬ್ ಸಹಯೋಗದಲ್ಲಿ ಭಾನುವಾರ ರಾತ್ರಿ ನಡೆದ ರಾಜ್ಯಮಟ್ಟದ ಆಹ್ವಾನಿತ ಕಬಡ್ಡಿ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತು.

ಫೈನಲ್‌ ಪಂದ್ಯದಲ್ಲಿ ಆಳ್ವಾಸ್ ತಂಡ ಬೆಂಗಳೂರಿನ ಎಂಇಜಿ ತಂಡವನ್ನು ಮಣಿಸಿತು. ಚಾಂಪಿಯನ್‌ ತಂಡಕ್ಕೆ ₹ 1 ಲಕ್ಷ ಮತ್ತು ರನ್ನರ್ಸ್‌ ಅಪ್‌ ಪಡೆದ ತಂಡಕ್ಕೆ ₹ 50 ಸಾವಿರ ಬಹುಮಾನ ಲಭಿಸಿತು. ಬೆಂಗಳೂರಿನ ಸಿಕ್ಯೂಎಎಲ್‌ ಹಾಗೂ ಭಟ್ಕಳದ ಕಟ್ಟೆವೀರ ತಂಡ ತೃತೀಯ ಸ್ಥಾನ ಹಂಚಿಕೊಂಡವು.

ಎಂ.ಇ.ಜಿ. ತಂಡದ ಮಂಜುನಾಥ ಉತ್ತಮ ರೈಡರ್, ಆಳ್ವಾಸ್ ಮೂಡುಬಿದಿರೆ ತಂಡದ ಜಸ್ವಂತ್ ಉತ್ತಮ ಕ್ಯಾಚರ್, ಭಟ್ಕಳದ ಕಟ್ಟೆವೀರ ತಂಡದ ಸಚಿನ್ ಉತ್ತಮ  ಆಟಗಾರ ಪ್ರಶಸ್ತಿ ಗಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry