’ಪದ್ಮಾವತ್‌’ ಚಿತ್ರ ತಡೆ ಅರ್ಜಿ ವಜಾ; ಸಿನಿಮಾ ಬಿಡುಗಡೆ ಆದೇಶ ಪಾಲನೆಗೆ ಸುಪ್ರೀಂ ತಾಕೀತು

7

’ಪದ್ಮಾವತ್‌’ ಚಿತ್ರ ತಡೆ ಅರ್ಜಿ ವಜಾ; ಸಿನಿಮಾ ಬಿಡುಗಡೆ ಆದೇಶ ಪಾಲನೆಗೆ ಸುಪ್ರೀಂ ತಾಕೀತು

Published:
Updated:
’ಪದ್ಮಾವತ್‌’ ಚಿತ್ರ ತಡೆ ಅರ್ಜಿ ವಜಾ; ಸಿನಿಮಾ ಬಿಡುಗಡೆ ಆದೇಶ ಪಾಲನೆಗೆ ಸುಪ್ರೀಂ ತಾಕೀತು

ನವದೆಹಲಿ: ‘ಪದ್ಮಾವತ್‌’ ಚಿತ್ರ ಆದೇಶ ವಾಪಸ್‌ ಪಡೆಯುವಂತೆ ಕೋರಿ ರಾಜಸ್ಥಾನ ಮತ್ತು ಮಧ್ಯಪ್ರದೇಶ ಸರ್ಕಾರಗಳು ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್‌ ಮಂಗಳವಾರ ತಿರಸ್ಕರಿಸಿದೆ.

ಸಂಜಯ್‌ ಲೀಲಾ ಬನ್ಸಾಲಿ ನಿರ್ದೇಶನದ ’ಪದ್ಮಾವತ್‌’ ಚಿತ್ರವನ್ನು ಜ.25ರಂದು ಬಿಡುಗಡೆ ಮಾಡಲು ಸಮ್ಮತಿಸಿ ಜ.18ರಂದು ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ.

‘ಚಿತ್ರವು ಸೆನ್ಸಾರ್‌ ಮಂಡಳಿಯ ಪ್ರಮಾಣಪತ್ರ ಪಡೆದಿದೆ ಹಾಗೂ ಕೋರ್ಟ್‌ ಆದೇಶವೂ ಇದೆ ಎಂಬುದನ್ನು ಸರ್ಕಾರಗಳು ಮತ್ತು ಜನರು ಗಮನಿಸಬೇಕು. ಸುಪ್ರೀಂ ಕೋರ್ಟ್‌ ಆದೇಶಕ್ಕೆ ಬದ್ಧರಾಗಿರುವುದು ಉತ್ತಮ. ನಿಮಗೆ ಬೇಡವಾದರೆ ಸಿನಿಮಾ ವೀಕ್ಷಿಸಬೇಡಿ. ಆದರೆ, ಚಿತ್ರ ಪ್ರದರ್ಶನದ ಮೇಲೆ ನಿಷೇಧ ಹೇರುವುದಿಲ್ಲ’ ಎಂದು ಕೋರ್ಟ್‌ ಹೇಳಿದೆ.

ಮಂಗಳವಾರ ಅರ್ಜಿಗಳ ವಿಚಾರಣೆ ಕೈಗೆತ್ತಿಕೊಂಡ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಮತ್ತು ನ್ಯಾಯಮೂರ್ತಿಗಳಾದ ಎ.ಎಂ. ಖಾನ್ವಿಲ್ಕರ್‌ ಮತ್ತು ಡಿ.ವೈ.ಚಂದ್ರಚೂಡ್‌ ಅವರಿದ್ದ ನ್ಯಾಯಪೀಠವು ಈ ಆದೇಶ ನೀಡಿದೆ. ರಾಜ್ಯ ಸರ್ಕಾರಗಳು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಯೂ ಕ್ರಮವಹಿಸಬೇಕು ಎಂದಿದೆ.

‘ಸಿನಿಮಾಟೊಗ್ರಾಫ್‌ ಕಾಯ್ದೆ’ಯ ಸೆಕ್ಷನ್‌ 6ರ ಪ್ರಕಾರ, ಕಾನೂನು ಮತ್ತು ಸುವ್ಯವಸ್ಥೆ ಉಲ್ಲಂಘನೆಯಾಗುವ ಸಾಧ್ಯತೆ ಇದ್ದಲ್ಲಿ ಯಾವುದೇ ವಿವಾದಾತ್ಮಕ ಚಲನಚಿತ್ರದ ಪ್ರದರ್ಶನಕ್ಕೆ ತಡೆ ನೀಡುವ ಅಧಿಕಾರ ಇದೆ ಎಂದು ರಾಜ್ಯಗಳು ವಾದಿಸಿದ್ದವು.

ಕರ್ಣಿ ಸೇನಾ ರಾಜಸ್ಥಾನದಲ್ಲಿ ಮಂಗಳವಾರವೂ ಚಿತ್ರ ಬಿಡುಗಡೆ ವಿರೋಧಿಸಿ ಪ್ರತಿಭಟನೆ ಮುಂದುವರಿಸಿದೆ.

16ನೇ ಶತಮಾನದ ಸೂಫಿ ಕವಿ ಮಲ್ಲಿಕ್‌ ಮುಹಮ್ಮದ್‌ ಜಯಸಿ ಅವರ ’ಪದ್ಮಾವತ್‌’ ಕವಿತೆಯನ್ನು ಆಧರಿಸಿ ನಿರ್ಮಿಸಲಾಗಿರುವ ಪದ್ಮಾವತ್‌ ಸಿನಿಮಾ ಇದೇ 25ರಂದು ಹಿಂದಿ, ತಮಿಳು ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗಲಿದೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry