ಸೆಮಿಫೈನಲ್‌ಗೆ ಎಲೈಸ್ ಲಗ್ಗೆ

7

ಸೆಮಿಫೈನಲ್‌ಗೆ ಎಲೈಸ್ ಲಗ್ಗೆ

Published:
Updated:
ಸೆಮಿಫೈನಲ್‌ಗೆ ಎಲೈಸ್ ಲಗ್ಗೆ

ಮೆಲ್ಬರ್ನ್‌: ಮೊದಲ ಬಾರಿ ಆಸ್ಟ್ರೇಲಿಯಾ ಓಪನ್‌ನಲ್ಲಿ ಆಡಿರುವ ಬೆಲ್ಜಿಯಂನ ಆಟಗಾರ್ತಿ ಎಲೈಸ್ ಮಾರ್ಟಿನ್‌ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರೀ ಕ್ವಾರ್ಟರ್‌ಫೈನಲ್ ಪಂದ್ಯ ಆಡಿದ ಎಲೈಸ್ 6–4, 6–0ರಲ್ಲಿ ಉಕ್ರೇನ್‌ನ ಎಲಿನಾ ಸ್ವಿಟೋಲಿನಾಗೆ ಸೋಲುಣಿಸಿದರು.

22 ವರ್ಷದ ಆಟಗಾರ್ತಿ ಮೊದಲ ಬಾರಿಗೆ ಆಡಿದ ಟೂರ್ನಿಯಲ್ಲಿಯೇ ಕ್ವಾರ್ಟರ್‌ಗೆ ಲಗ್ಗೆಯಿಡುವ ಮೂಲಕ ಹೊಸ ವಿಶ್ವಾಸ ಹುಟ್ಟುಹಾಕಿದ್ದಾರೆ. ಈ ಮೊದಲು ಅವರು ಫ್ರೆಂಚ್, ಅಮೆರಿಕ, ವಿಂಬಲ್ಡನ್ ಓಪನ್ ಟೂರ್ನಿಯಲ್ಲಿ ಆಡಿದ್ದರೂ ಅರ್ಹತಾ ಸುತ್ತುಗಳಲ್ಲಿಯೇ ಸೋತಿದ್ದರು.

ನಡಾಲ್  ನಿವೃತ್ತಿ:  ಸ್ಪೇನ್‌ನ ಆಟಗಾರ ರಫೆಲ್‌ ನಡಾಲ್‌ ಆಸ್ಟ್ರೇಲಿಯಾ ಓಪನ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ಮಂಗಳವಾರ ಗಾಯಗೊಂಡು ಹಿಂದೆಸರಿದಿದ್ದಾರೆ.

ಪುರುಷರ ಸಿಂಗಲ್ಸ್ ವಿಭಾಗದ ಪಂದ್ಯದಲ್ಲಿ ನಡಾಲ್‌ 6–3, 3–6, 7–6, 2–6, 0–2ರಲ್ಲಿ ಮರಿನ್ ಸಿಲಿಕ್ ಎದುರು ಹಿಂದೆ ಉಳಿದಿದ್ದರು. ಈ ವೇಳೆ ಅವರ ಬಲಗಾಲಿನಲ್ಲಿ ನೋವು ಕಾಣಿಸಿಕೊಂಡಿದ್ದರಿಂದ ಪಂದ್ಯದಿಂದ ಹಿಂದೆ ಸರಿದರು. ಸಿಲಿಕ್ ಸೆಮಿಫೈನಲ್‌ಗೆ ಲಗ್ಗೆಯಿಟ್ಟರು.

ಬ್ರಿಟನ್‌ನ ಆಟಗಾರ ಎಡ್ಮಂಡ್‌ 6–4, 3–6, 6–3, 6–4ರಲ್ಲಿ ಗ್ರಿಗೊರ್ ದಿಮಿತ್ರೊವ್ ಅವರನ್ನು ಮಣಿಸಿ ಕ್ವಾರ್ಟರ್‌ಫೈನಲ್ ತಲುಪಿದರು.

ಸ್ಯಾಂಗ್ರೆನ್‌–ಚುಂಗ್ ಮುಖಾಮುಖಿ: ಬುಧವಾರ ನಡೆಯುವ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ ದಕ್ಷಿಣ ಕೊರಿಯಾದ ಚುಂಗ್ ಹ್ಯುಯಾನ್ ಮತ್ತು ಅಮೆರಿಕದ ಟೆನ್ನಿಸ್ ಸ್ಯಾಂಗ್ರೆನ್‌ ಮುಖಾಮುಖಿಯಾಗಲಿದ್ದಾರೆ. ಸ್ಯಾಂಗ್ರೆನ್‌ ಸೋಮವಾರ ನಡೆದ ಪಂದ್ಯದಲ್ಲಿ 7–6, 7–5, 7–6ರಲ್ಲಿ ಆರು ಬಾರಿ ಇಲ್ಲಿ ಚಾಂಪಿಯನ್ ಆಗಿರುವ ನೊವಾಕ್ ಜೊಕೊವಿಚ್‌ಗೆ ಸೋಲುಣಿಸಿದ್ದರು. ಚುಂಗ್‌ ಆಕ್ಲಂಡ್ ಓಪನ್‌ನಲ್ಲಿ ಸ್ಯಾಂಗ್ರೆನ್‌ಗೆ ಸೋಲಿಸಿದ್ದರು.

ಇನ್ನೊಂದು ಪಂದ್ಯದಲ್ಲಿ ರೋಜರ್ ಫೆಡರರ್‌ ಹಾಗೂ ಥಾಮಸ್ ಬೆರ್ಡಿಕ್ ಪರಸ್ಪರ ಪೈಪೋಟಿ ನಡೆಸಲಿದ್ದಾರೆ.

ವೋಜ್ನಿಯಾಕಿಗೆ ಜಯ: ಎರಡನೇ ಶ್ರೇಯಾಂಕದ ಕರೊಲಿನಾ ವೋಜ್ನಿಯಾಕಿ 6–0, 6–7, 6–2ರಲ್ಲಿ ಸ್ಪೇನ್‌ನ ಶ್ರೇಯಾಂಕ ರಹಿತ ಆಟಗಾರ್ತಿ ಕಾರ್ಲಾ ಸೂರೆಜ್‌ ನವಾರೊ ವಿರುದ್ಧ ಗೆದ್ದ ಕ್ವಾರ್ಟರ್‌ಫೈನಲ್ ಪ್ರವೇಶಿಸಿದ್ದಾರೆ.

ಮುಂದಿನ ಸುತ್ತಿನಲ್ಲಿ ವೋಜ್ನಿಯಾಕಿ ಬೆಲ್ಜಿಯಂನ ಎಲೈಸ್ ಮಾರ್ಟಿನ್ಸ್ ವಿರುದ್ಧ ಆಡಲಿದ್ದಾರೆ.

ಮಹಿಳೆಯರ ಸಿಂಗಲ್ಸ್ ವಿಭಾಗದ ಇತರ ಕ್ವಾರ್ಟರ್‌ಫೈನಲ್‌ನಲ್ಲಿ ಬುಧವಾರ ಸಿಮೊನಾ ಹಲೆಪ್ ಆರನೇ ಶ್ರೇಯಾಂಕದ ಕರೊಲಿನಾ ಪ್ಲಿಸ್ಕೋವಾ ಎದುರು ಆಡಲಿದ್ದಾರೆ. ಏಂಜಲಿಕ್ ಕೆರ್ಬರ್‌ ಅಮೆರಿಕದ ಮ್ಯಾಡಿಸನ್‌ ಕೀಸ್ ಅವರ ಸವಾಲು ಎದುರಿಸಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry