ನಗರ ದೇವತೆ ಜಾತ್ರೆ: ಹಂದರ ಕಂಬಕ್ಕೆ ಪೂಜೆ

7

ನಗರ ದೇವತೆ ಜಾತ್ರೆ: ಹಂದರ ಕಂಬಕ್ಕೆ ಪೂಜೆ

Published:
Updated:

ದಾವಣಗೆರೆ: ನಗರ ದೇವತೆ ದುರ್ಗಾಂಬಿಕಾ ದೇವಿಯ ಜಾತ್ರೆಯ ಅಂಗವಾಗಿ ಮಂಗಳವಾರ ಬೆಳಿಗ್ಗೆ 11ಕ್ಕೆ ಹಂದರ ಕಂಬದ ಪೂಜೆ ನೆರವೇರಿತು. ದೇವಸ್ಥಾನದ ಟ್ರಸ್ಟ್‌ ಗೌರವಾಧ್ಯಕ್ಷ ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಆರಂಭವಾದ ಪೂಜಾ ಕಾರ್ಯಕ್ರಮಗಳು ಆರಂಭದಲ್ಲಿ ದೇವಸ್ಥಾನದಲ್ಲಿನ ಗಣೇಶನಿಗೆ ಪೂಜೆ ಸಲ್ಲಿಸಿ, ನಂತರ ದುರ್ಗಾಂಬಿಕಾ ದೇವಿಗೆ ಕಂಕಣಧಾರಣೆ ಮಾಡಲಾಯಿತು.

ದೇಗುಲದ ಹೊರಗೆ ಹಂದರ ಕಂಬ ನೆಟ್ಟು ಹಾಲು ತುಪ್ಪ, ಪಂಚಲೋಹ ಹಾಕಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ನಗರ ದೇವತೆ ಜಾತ್ರೆಯ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಪ್ರೀತಿ ಬಕ್ಕೇಶ್, ಡಾ.ಪ್ರಭಾ ಎಸ್‌.ಎಸ್‌.ಮಲ್ಲಿಕಾರ್ಜುನ, ದೇಗುಲದ ಧರ್ಮದರ್ಶಿ ಗೌಡ್ರು ಚನ್ನಬಸಪ್ಪ, ಪಿಸಾಳಿ ಸತ್ಯನಾರಾಯಣ, ಹನುಮಂತರಾವ್‌ ಸಾವಂತ್‌, ಉಮೇಶ್‌ ಸಾಳಂಕಿ, ಎಚ್.ಬಿ.ಗೋಣೆಪ್ಪ, ರಾಮಕೃಷ್ಣ, ಎಲ್‌.ಎಂ.ಹನುಮಂತಪ್ಪ, ನೀಲಗಿರಿಯಪ್ಪ, ನಾಗರಾಜ್‌, ಕರಿಗಾರ ಬಸಪ್ಪ ಹಾಗೂ ಟ್ರಸ್ಟ್‌ನ ಪದಾಧಿಕಾರಿಗಳೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry