ಮಲ್ಲಮ್ಮಗೆ ಅಬ್ಬೆ, ಸಂಗಯ್ಯಗೆ ಕೃಷಿ ಪ್ರಶಸ್ತಿ

7
ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನದಿಂದ ಪುರಸ್ಕಾರ

ಮಲ್ಲಮ್ಮಗೆ ಅಬ್ಬೆ, ಸಂಗಯ್ಯಗೆ ಕೃಷಿ ಪ್ರಶಸ್ತಿ

Published:
Updated:
ಮಲ್ಲಮ್ಮಗೆ ಅಬ್ಬೆ, ಸಂಗಯ್ಯಗೆ ಕೃಷಿ ಪ್ರಶಸ್ತಿ

ಬಾಗಲಕೋಟೆ: ಬೀಳಗಿ ತಾಲ್ಲೂಕು ಬಾಡಗಂಡಿಯ ಎಸ್.ಆರ್.ಪಾಟೀಲ ಶಿಕ್ಷಣ ಪ್ರತಿಷ್ಠಾನ ವತಿಯಿಂದ ದಿವಂಗತ ಈರಮ್ಮ ಹಾಗೂ ರುದ್ರಗೌಡ ಪಾಟೀಲ ಅವರ ಸ್ಮರಣೆಗಾಗಿ ನೀಡುವ ಅಬ್ಬೆ ಹಾಗೂ ಕೃಷಿ ಪ್ರಶಸ್ತಿಗೆ ಕ್ರಮವಾಗಿ ಡಾ.ಮಲ್ಲಮ್ಮ ಶಿವಾನಂದ ಯಾಳವಾರ ಹಾಗೂ ಸಂಗಯ್ಯ ಮುಕ್ಕಯ್ಯ ಹಿರೇಮಠ ಆಯ್ಕೆಯಾಗಿದ್ದಾರೆ.

ಪ್ರಶಸ್ತಿಯು ತಲಾ ₹ 1 ಲಕ್ಷ ನಗದು ಹಾಗೂ ಫಲಕ ಒಳಗೊಂಡಿದೆ. ಬಾಡಗಂಡಿಯ ಬಾಪೂಜಿ ಅಂತರರಾಷ್ಟ್ರೀಯ ವಸತಿ ಶಾಲೆಯಲ್ಲಿ ಇದೇ 26ರಂದು ನಡೆಯುವ 'ಸಾರ್ಥಕ ಸಂಭ್ರಮ-' ಸಮಾರಂಭದಲ್ಲಿ ವಿಧಾನಪರಿಷತ್ ಸದಸ್ಯ ಎಸ್.ಆರ್.ಪಾಟೀಲ ಪ್ರಶಸ್ತಿ ಪ್ರದಾನ ಮಾಡುವರು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry