ಕ್ಯಾಪ್ಟನ್ ಗೋಪಿನಾಥ್ ಬಂಧನ ವಾರಂಟ್‌ಗೆ ತಡೆ

7

ಕ್ಯಾಪ್ಟನ್ ಗೋಪಿನಾಥ್ ಬಂಧನ ವಾರಂಟ್‌ಗೆ ತಡೆ

Published:
Updated:

ಬೆಂಗಳೂರು: ಕಿಂಗ್‌ಫಿಷರ್ ಮತ್ತು ಡೆಕ್ಕನ್‌ ವಿಮಾನಯಾನ ಸಂಸ್ಥೆ ವಿಲೀನಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಡೆಕ್ಕನ್ ಚಾರ್ಟರ್ಸ್‌ ಲಿಮಿಟೆಡ್‌ನ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ವಿರುದ್ಧ ಅಧೀನ ನ್ಯಾಯಾಲಯ ಹೊರಡಿಸಿರುವ ಬಂಧನ ವಾರಂಟ್‌ಗೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಈ ಸಂಬಂಧ ಗೋಪಿನಾಥ್, ಮುಂಬೈನ ಆ್ಯಂಬಿಟ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿ, ಮುಂಬೈನ ಅಶೋಕ್ ವಾಧಾ ಹಾಗೂ ಠಾಣೆಯ ವಿನೋದ್‌ ವಾಧವಾನಿ ಸಲ್ಲಿಸಿರುವ 4 ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

‘ವಿಲೀನ ಪ್ರಕ್ರಿಯೆ ನ್ಯಾಯಸಮ್ಮತವಾಗಿಲ್ಲ’ ಎಂಬ ಆರೋಪದಡಿ ‘ಗಂಭೀರ ವಂಚನೆಗಳ ತನಿಖಾ ಕಚೇರಿ’ (ಎಸ್‌ಎಫ್‌ಐಎ) ದೂರು ದಾಖಲಿಸಿತ್ತು. ಇದನ್ನು ಆಧರಿಸಿ ಬೆಂಗಳೂರಿನ ವಿಶೇಷ ನ್ಯಾಯಾಲಯ 2017ರ ಡಿ.28ರಂದು ವಿಜಯ್‌ ಮಲ್ಯ ಸೇರಿದಂತೆ ಒಟ್ಟು 19 ಆರೋಪಿಗಳ ಬಂಧನದ ವಾರಂಟ್ ಜಾರಿಗೊಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry