ತಾಂತ್ರಿಕ ಕೋರ್ಸ್‌ಗಳಲ್ಲಿ ವರ್ಚುವಲ್‌ ಪ್ರಯೋಗಾಲಯ

7

ತಾಂತ್ರಿಕ ಕೋರ್ಸ್‌ಗಳಲ್ಲಿ ವರ್ಚುವಲ್‌ ಪ್ರಯೋಗಾಲಯ

Published:
Updated:

ನವದೆಹಲಿ: ಬಿ.ಟೆಕ್‌ ಕೋರ್ಸ್‌ಗಳ ಪರಿಷ್ಕೃತ ಪಠ್ಯಕ್ರಮದಲ್ಲಿ ವರ್ಚುವಲ್‌ ಪ್ರಯೋಗಾಲಯವೆಂಬ ಹೊಸ ಪರಿಕಲ್ಪನೆಯನ್ನು ಸೇರಿಸಿಕೊಳ್ಳಲಾಗಿದೆ.

‘ಹೊಸ ಪಠ್ಯಕ್ರಮದಲ್ಲಿ, ವಿನೂತನವಾದ ವರ್ಚುವಲ್‌ ಪ್ರಯೋಗಾಲಯ ಪರಿಚಯಿಸಲಾಗುವುದು. ಆವಿಷ್ಕಾರ ಮತ್ತು ಸಂಶೋಧನೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪರಿಷ್ಕೃತ ಪಠ್ಯಕ್ರಮದಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಇದು ಭಾರತದಲ್ಲಿನ ಎಂಜಿನಿಯರಿಂಗ್‌ ಶಿಕ್ಷಣವನ್ನು ಸಮಗ್ರವಾಗಿ ಪರಿವರ್ತಿಸಲಿದೆ’ ಎಂದು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್‌ನ (ಎಐಸಿಟಿಇ) ಅಧ್ಯಕ್ಷ ಅನಿಲ್‌ ಸಹಸ್ರಬುದ್ದೆ ಹೇಳಿದ್ದಾರೆ.

‘ಸ್ಥಳೀಯ ಅಗತ್ಯಗಳಿಗೆ ಅನುಗುಣವಾಗಿ ಪಠ್ಯಕ್ರಮದಲ್ಲಿ ಬದಲಾವಣೆ ತರುವುದಕ್ಕೆ ತಾಂತ್ರಿಕ ಶಿಕ್ಷಣ ಸಂಸ್ಥೆಗಳಿಗೆ ಅವಕಾಶ ಇದೆ. ಆದರೆ ಪರಿಷ್ಕೃತ ಪಠ್ಯ

ಕ್ರಮದ ಮೂಲ ಅಂಶಗಳನ್ನು ಎಲ್ಲ ಸಂಸ್ಥೆಗಳೂ ಅನುಸರಿಸಬೇಕು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry