ಕಲಬುರ್ಗಿಯಲ್ಲಿ ಸಾಂಕೇತಿಕ ಪ್ರತಿಭಟನೆ: ಬಂದ್‌ ಇಲ್ಲ

7

ಕಲಬುರ್ಗಿಯಲ್ಲಿ ಸಾಂಕೇತಿಕ ಪ್ರತಿಭಟನೆ: ಬಂದ್‌ ಇಲ್ಲ

Published:
Updated:
ಕಲಬುರ್ಗಿಯಲ್ಲಿ ಸಾಂಕೇತಿಕ ಪ್ರತಿಭಟನೆ: ಬಂದ್‌ ಇಲ್ಲ

ಬೆಂಗಳೂರು: ಮಹದಾಯಿ ಯೋಜನೆ ವಿವಾದವನ್ನು ಸಂಧಾನದ ಮೂಲಕ ಬಗೆಹರಿಸಲು ಪ್ರಧಾನಿ ನರೇಂದ್ರ ಮೋದಿ ಮಧ್ಯಸ್ಥಿಕೆ ವಹಿಸಬೇಕೆಂದು ಒತ್ತಾಯಿಸಿ ಕನ್ನಡ ಸಂಘಟನೆಗಳ ಒಕ್ಕೂಟವು ಕರೆ ನೀಡಿರುವ ‘ಕರ್ನಾಟಕ ಬಂದ್‌’ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕೆಲ ಭಾಗಗಳಲ್ಲಿ ಬಸ್‌ ಸಂಚಾರ ಸ್ಥಗಿತ ಹಾಗೂ ವ್ಯತ್ಯಯಗೊಂಡಿದೆ. ಮಂಗಳೂರು, ಉಡುಪಿ, ಶಿರಸಿ, ರಾಯಚೂರು ಹಾಗೂ ಕಲಬುರ್ಗಿಯಲ್ಲಿ ಸಹಜ ಸ್ಥಿತಿ ಮುಂದುವರಿದಿದೆ.

ಬೆಂಗಳೂರಿನ ಅತ್ತಿಬೆಲೆ ರಸ್ತೆಯಲ್ಲಿ ಕನ್ನಡ ಸಂಘಟನೆಯ ಹೋರಾಟಗಾರರು ಉರುಳುಸೇವೆ ನಡೆಸಿ ಪ್ರತಿಭಟನೆ ನಡೆಸಿದರು.

ಸಾಂಕೇತಿಕ ಪ್ರತಿಭಟನೆ

ಕಲಬುರ್ಗಿ: ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಬೆಂಬಲಿಸಿ ಕೆಲವು ಕನ್ನಡಪರ ಸಂಘಟನೆಗಳು ಸಾಂಕೇತಿಕ ಪ್ರತಿಭಟನೆ ನಡೆಸಲಿವೆ. ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸುತ್ತಿವೆ. ಜನಜೀವನ ಸಹಜವಾಗಿದೆ.

ಪದವಿ ಪೂರ್ವ ಶಿಕ್ಷಣ ಇಲಾಖೆಯು ಇಂದು ನಡೆಯಬೇಕಿದ್ದ ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಯನ್ನು ಫೆಬ್ರುವರಿ 21ಕ್ಕೆ ಮುಂದೂಡಿದೆ.

ಬಲವಂತವಾಗಿ ಅಂಗಡಿ ಬಂದ್‌

ದಾವಣಗೆರೆ: ನಗರದಲ್ಲಿ ಕೆಎಸ್ ಆರ್ ಟಿ ಸಿ ಬಸ್ ಸಂಚಾರ ತಾತ್ಕಾಲಿಕ ವಾಗಿ ಸ್ಥಗಿತಗೊಂಡಿದೆ. ಬಲವಂತವಾಗಿ ಅಂಗಡಿ, ಪೆಟ್ರೋಲ್ ಬಂಕ್ ಬಂದ್ ಮಾಡಿಸಲಾಗುತ್ತಿದೆ.

ಜಯದೇವ ವೃತ್ತದಲ್ಲಿ ಕೆಲ ಕನ್ನಡ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬೆಳಿಗ್ಗೆ ಪ್ರತಿಭಟನಾಕಾರರು ಬಸ್ಸುಗಳು ನಿಲ್ದಾಣದಿಂದ ಹೊರಗೆ ಹೋಗದಂತೆ ತಡೆದರು.

ಬಂದ್‌ಗೆ ನೀರಸ ಪ್ರತಿಕ್ರಿಯೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಗುರುವಾರ ಜನಜೀವನ ಎಂದಿನಂತೆ ಕಂಡುಬಂತು.

ಬಂದ್ ಗೆ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ನೈತಿಕ ಬೆಂಬಲವನ್ನಷ್ಟೇ ಘೋಷಿಸಿದ್ದು, ಶಾಲಾ, ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಲಿವೆ.

ರಾಯಚೂರಿನಲ್ಲಿ ಬಂದ್ ಇಲ್ಲ

ರಾಯಚೂರು: ಕರ್ನಾಟಕ ಬಂದ್‌ಗೆ ರಾಯಚೂರಿನಲ್ಲಿ ಯಾವುದೇ ಬೆಂಬಲ ವ್ಯಕ್ತವಾಗಿಲ್ಲ. ಶಾಲಾ, ಕಾಲೇಜುಗಳು, ಸಾರಿಗೆ, ಅಂಗಡಿಗಳು ಹಾಗೂ ಜನಜೀವನ ಎಂದಿನಂತಿದೆ.

ಹುಬ್ಬಳ್ಳಿ ಮಾರ್ಗದಲ್ಲಿ ಸಂಚರಿಸಬೇಕಿದ್ದ ಸರ್ಕಾರಿ ಬಸ್‌ಗಳನ್ನು ಮಾತ್ರ ಬಿಟ್ಟಿಲ್ಲ. ಇನ್ನುಳಿದಂತೆ ಎಲ್ಲ ಬಸ್‌ಗಳು ಕಾರ್ಯನಿರ್ವಹಿಸುತ್ತಿವೆ ಎಂದು ರಾಯಚೂರು ಬಸ್ ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ.

ಯಥಾಸ್ಥಿತಿ

ವಿಜಯಪುರ: ಕನ್ನಡಪರ ಸಂಘಟನೆಗಳಿಂದ ಬಂದ್ ಗೆ ಬೆಂಬಲ. ವಾಹನ ಸಂಚಾರ ಯಥಾಸ್ಥಿತಿ ಮುಂದುವರೆದಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry