ಹಾಡಹಗಲೇ ತಾಯಿ, ಮಗನ ಹತ್ಯೆ: ಸಿಸಿಟಿವಿಯಲ್ಲಿ ಸೆರೆ

7

ಹಾಡಹಗಲೇ ತಾಯಿ, ಮಗನ ಹತ್ಯೆ: ಸಿಸಿಟಿವಿಯಲ್ಲಿ ಸೆರೆ

Published:
Updated:
ಹಾಡಹಗಲೇ ತಾಯಿ, ಮಗನ ಹತ್ಯೆ: ಸಿಸಿಟಿವಿಯಲ್ಲಿ ಸೆರೆ

ಮೀರತ್: ಬೈಕ್‌ನಲ್ಲಿ ಬಂದ ಮೂವರು ಅಪರಿಚಿತರು ಹಾಡಹಗಲೇ ತಾಯಿ, ಮಗನನ್ನು ಗುಂಡು ಹಾರಿಸಿ ಕೊಲೆ ಮಾಡಿರುವ ಘಟನೆ ಇಲ್ಲಿನ ಸೊರ್ಕಾ ಗ್ರಾಮದಲ್ಲಿ ಬುಧವಾರ ನಡೆದಿದೆ.

ಮೃತ ಮಹಿಳೆ ನಿಛತ್ತರ್ ಕೌರ್‌(60) ಅವರು ತಮ್ಮ ಮಗ ಬಲ್ವಿಂದರ್ ಸಿಂಗ್(26) ಜತೆ ನಿನ್ನೆಯಷ್ಟೇ ತಮ್ಮ ಪತಿ ನರೀಂದರ್‌ ಸಿಂಗ್‌ ಅವರ ಸಾವಿನ ಪ್ರಕರಣದ ವಿಚಾರಣೆಗೆ ಹಾಜರಾಗಿದ್ದರು. ನರೀಂದರ್‌ ಸಿಂಗ್‌ ಅವರು 15 ತಿಂಗಳ ಹಿಂದೆ ಕೊಲೆಯಾಗಿದ್ದರು.

ಕೌರ್‌ ಮತ್ತೊಬ್ಬ ಮಹಿಳೆಯ ಜತೆ ಮನೆಯ ಹೊರಗೆ ಮಾತನಾಡುತ್ತಾ ಕುಳಿತಿದ್ದ ವೇಳೆ ಬಂದ ಅಪರಿಚಿತ ಯುವಕರು ಈ ಕೃತ್ಯವೆಸಗಿದ್ದಾರೆ. ಕೇವಲ ಒಂದು ನಿಮಿಷದ ಅವಧಿಯಲ್ಲಿ ಮಹಿಳೆ ಮೇಲೆ 8 ಗುಂಡುಗಳನ್ನು ಹಾರಿಸಿ ಪರಾರಿಯಾಗಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಈ ಘಟನೆಗೂ ಮುನ್ನ ಕಾರಿನಲ್ಲಿ ಮನೆಗೆ ತೆರಳುತ್ತಿದ್ದ ಬಲ್ವಿಂದರ್‌ ಅವರನ್ನು ಕೊಲೆ ಮಾಡಲಾಗಿತ್ತು. ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಗುಂಡು ಹಾರಿಸಿ ಕೊಲೆ ಮಾಡಿದ್ದರು.

2016ರಲ್ಲಿ ನಡೆದಿದ್ದ ನರೇದ್ರರ್‌ ಸಿಂಗ್‌ ಕೊಲೆ ಪ್ರಕರಣದ ಸಂಬಂಧ ತಾಯಿ, ಮಗ ಗುರುವಾರ ವಿಚಾರಣೆಗೆ ಹಾಜರಾಗಬೇಕಿತ್ತು ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಜಮೀನು ವಿಚಾರದಲ್ಲಿ ವಿವಾದ ಹೊಂದಿದ್ದ ಮೃತರ ಸಂಬಂಧಿಯೇ ಕೊಲೆಯ ರೂವಾರಿ ಎಂದು ಪೊಲೀಸರು ಶಂಕಿಸಿದ್ದಾರೆ. ನರೀಂದರ್‌ ಸಿಂಗ್‌ ಕೊಲೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗದಂತೆ ಕೊಲೆ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.

ಪ್ರಕರಣ ಸಂಬಂಧ ಒಬ್ಬನನ್ನು ಬಂಧಿಸಲಾಗಿದೆ ಎಂದು ಎಡಿಜಿಪಿ ಆನಂದ್ ಕುಮಾರ್ ಹೇಳಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry