ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಎಸ್‌ಟಿ ಸಂಗ್ರಹ ಏರಿಕೆ

Last Updated 25 ಜನವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: ಎರಡು ತಿಂಗಳ ಕಾಲ ನಿರಂತರವಾಗಿ ಕುಸಿತ ಕಂಡಿದ್ದ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಸಂಗ್ರಹವು ಡಿಸೆಂಬರ್ ತಿಂಗಳಲ್ಲಿ ಹೆಚ್ಚಳಗೊಂಡಿದೆ.

2017ರ ಡಿಸೆಂಬರ್‌ನಲ್ಲಿ ಸಂಗ್ರಹವಾದ ಒಟ್ಟು ತೆರಿಗೆ ವರಮಾನವು (ಜನವರಿ 24ರವರೆಗೆ) ₹ 86,703 ಕೋಟಿಗಳಿಗೆ ತಲುಪಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಟ್ವೀಟ್‌ ಮಾಡಿದೆ.

ನವೆಂಬರ್‌ನಲ್ಲಿ ತೆರಿಗೆ ಸಂಗ್ರಹವು ಸತತ ಎರಡನೇ ತಿಂಗಳು ಕುಸಿತ ಕಂಡಿತ್ತು. ಸೆಪ್ಟೆಂಬರ್‌ನಲ್ಲಿ ₹ 92,150 ಕೋಟಿಗಳಷ್ಟಿದ್ದ ತೆರಿಗೆ ವರಮಾನವು ಅಕ್ಟೋಬರ್‌ ಮತ್ತು ನವೆಂಬರ್‌ ತಿಂಗಳಲ್ಲಿ ಕ್ರಮವಾಗಿ ₹ 83 ಸಾವಿರ ಕೋಟಿ ಮತ್ತು ₹ 80,808 ಕೋಟಿಗಳಿಗೆ ಇಳಿಕೆ ಕಂಡಿತ್ತು. ಈಗ ಡಿಸೆಂಬರ್‌ನಲ್ಲಿ ತೆರಿಗೆ ವರಮಾನವು ₹ 867 ಕೋಟಿಗಳಷ್ಟು ಹೆಚ್ಚಳವಾಗಿ, ಶೇ 7ರಷ್ಟು ಏರಿಕೆ ದಾಖಲಿಸಿದೆ.

ಜನವರಿ 24ರವರೆಗೆ ಒಂದು ಕೋಟಿಯಷ್ಟು ತೆರಿಗೆದಾರರು ‘ಜಿಎಸ್‌ಟಿ’ಯಡಿ ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ 17.11 ಲಕ್ಷ ವಹಿವಾಟುದಾರರು ರಾಜಿ ತೆರಿಗೆ (ಕಂಪೋಸಿಷನ್‌ ಸ್ಕೀಮ್‌) ಆಯ್ಕೆ ಮಾಡಿಕೊಂಡಿದ್ದಾರೆ. ಇವರು ಪ್ರತಿ ಮೂರು ತಿಂಗಳಿಗೊಮ್ಮೆ ರಿಟರ್ನ್ಸ್‌ ಸಲ್ಲಿಸಬಹುದಾಗಿದೆ.

ಡಿಸೆಂಬರ್‌ ತಿಂಗಳಲ್ಲಿ 56.30 ಲಕ್ಷದಷ್ಟು ‘ಜಿಎಸ್‌ಟಿಆರ್‌ 3ಬಿ’ ರಿಟರ್ನ್ಸ್‌ ಸಲ್ಲಿಕೆಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT