ಎಲ್ಐಸಿ ಪ್ರತಿನಿಧಿಗಳ ವೃತ್ತಿ ದಿನಾಚರಣೆ

7

ಎಲ್ಐಸಿ ಪ್ರತಿನಿಧಿಗಳ ವೃತ್ತಿ ದಿನಾಚರಣೆ

Published:
Updated:
ಎಲ್ಐಸಿ ಪ್ರತಿನಿಧಿಗಳ ವೃತ್ತಿ ದಿನಾಚರಣೆ

ಕೊಪ್ಪಳ: ಜೀವವಿಮಾ ಪ್ರತಿನಿಧಿ ವೃತ್ತಿ ಗೌರವಯುತವಾದದ್ದು. ಘನತೆಯನ್ನು ಎತ್ತಿ ಹಿಡಿಯುವ ದಿನವಿದು ಎಂದು ಭಾರತೀಯ ಜೀವ ವಿಮಾ ಪ್ರತಿನಿಧಿಗಳ ಸಂಘದ ಕಾರ್ಯದರ್ಶಿ ಶ್ರೀನಿವಾಸ ಪಂಡಿತ ಹೇಳಿದರು.

ನಗರದ ಪೃಥ್ವಿ ಫಿಲ್ಮ್‌ ಇನ್ಸ್‌ಟಿಟ್ಯೂಟ್‌ನ ಸಭಾಂಗಣದಲ್ಲಿ ಗುರುವಾರ ಎಲ್‌ಐಸಿ ವೃತ್ತಿ ಸಂರಕ್ಷಣಾ ದಿನಾಚರಣೆ ಸಮಾರಂಭದಲ್ಲಿ ಅವರು ಮಾತನಾಡಿ ವೃತ್ತಿಯಲ್ಲಿ ಪರಿಪೂರ್ಣತೆ ಹೊಂದಿದ್ದರೆ ಮಾತ್ರ ನಾವು ವೃತ್ತಿಪರರಾಗಲು ಸಾಧ್ಯ ಎಂದರು.

ವಿಭಾಗೀಯ ಸಂಘಟನಾ ಕಾರ್ಯದರ್ಶಿ ರಾಜಶೇಖರ ಲಾಡಿ ಮಾತನಾಡಿ, ಸಂಘಟನೆಗಳ ಮೂಲಕ ಮಾತ್ರ ಪ್ರತಿನಿಧಿಗಳ ಬೇಡಿಕೆ ಈಡೇರಿಸಲು ಸಾಧ್ಯ ಎಂದರು.

ರಂಗನಾಥ ಕೋಳೂರು, ಮಾಬುಸಾಬ ಮಂಗಳೂರ, ತೇಜಪ್ಪ ಹೂಗಾರ, ರೇವಣಪ್ಪ ಕುರಿ, ಗವಿಸಿದ್ದಪ್ಪ, ಮಾರುತಿ ಹೊಸಳ್ಳಿ ಇದ್ದರು.

ಸಣ್ಣಬಸಪ್ಪ ಹಳ್ಳಿಕೇರಿ ಪ್ರಾಸ್ತಾವಿಕ ಮಾತನಾಡಿದರು. ಎಂ. ಎ. ವಾಜೀದ ಸ್ವಾಗತಿಸಿದರು. ಭೀಮಸೇನ ಸಿದ್ಧಾಂತಿ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry